Tuesday, October 4, 2022
Home ಸುದ್ದಿಗಳು ಕರ್ನಾಟಕ BIG NEWS: ಗ್ರಾಹಕರೇ ಎಚ್ಚರ, ಗೂಗಲ್‌ನಲ್ಲಿ 'Helpline Number' ಸರ್ಚ್ ಮಾಡುವಾಗ ಎಚ್ಚರ ತಪ್ಪದಿರಿ..!

BIG NEWS: ಗ್ರಾಹಕರೇ ಎಚ್ಚರ, ಗೂಗಲ್‌ನಲ್ಲಿ ‘Helpline Number’ ಸರ್ಚ್ ಮಾಡುವಾಗ ಎಚ್ಚರ ತಪ್ಪದಿರಿ..!

ಮಂಗಳೂರು: ನೀವೇನಾದರೂ ಗೂಗಲ್‌ನಲ್ಲಿ ಹೆಲ್ಪ್‌ ಲೈನ್ ನಂಬರ್ಸ್‌ಗಳಿಗೆ ಸರ್ಚ್ ಮಾಡ್ತೀರಾ? ಮಾಡ್ತೀರಿ ಅಂದ್ರೆ ಇನ್ಮುಂದೆ ಹೆಚ್ಚು ಅಲರ್ಟ್ ಆಗಿರೋದು ಒಳ್ಳೆಯದು. ಯಾಕಂದ್ರೆ ಸೈಬರ್ ವಂಚಕರು ಗೂಗಲ್‌ನಲ್ಲೇ ಫೇಕ್ ಹೆಲ್ಪ್ ಲೈನ್ ನಂಬರ್ ಹಾಕಿ ಹಣ ದೋಚಲು ಶುರು ಮಾಡಿಕೊಂಡಿದ್ದಾರೆ.

ಗೂಗಲ್‌ನಲ್ಲಿ ಹೆಲ್ಪ್ ಲೈನ್, ಕಸ್ಟಮರ್ ಕೇರ್ ನಂಬರ್ ಹುಡುಕಿ ಕರೆ ಮಾಡುವ ಮೊದಲು ಹತ್ತು ಬಾರಿ ಯೋಚನೆ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ.

ಯಾಕೆಂದರೆ ಸೈಬರ್ ವಲ್ಚರ್‌ಗಳು ಬ್ಯಾಂಕ್ ಖಾತೆಗಳಿಂದ ಹಣ ದೋಚಲು ನಕಲಿ ಹೆಲ್ಪ್ ಲೈನ್, ಕಸ್ಟಮರ್ ಕೇರ್ ನಂಬರ್‌ಗಳು ಗೂಗಲ್ ಸರ್ಚ್‌ನಲ್ಲಿ ಮೊದಲು ಬರುವಂತೆ ನೋಡಿಕೊಳ್ಳುತಿದ್ದಾರೆ. ಆನ್‌ಲೈನ್‌ನಲ್ಲಿ ಖರೀದಿ ಅಥವಾ ಹಣ ಪಾವತಿಗೆ ಸಂಬಂಧಿಸಿದಂತೆ ಕೆಲವು ಸಮಸ್ಯೆ ಸಂದೇಹ ಎದುರಾದಾಗ ಅಥವಾ ಕ್ರೆಡಿಟ್, ಡೆಬಿಟ್ ಕಾರ್ಡ್ ಸೇರಿದಂತೆ ಬ್ಯಾಂಕ್‌ಗಳಿಗೆ ಸಂಬಂಧಿಸಿದ ಮಾಹಿತಿ ಪಡೆಯಲು ಹೀಗೆ ಹಲವಾರು ಸಂದರ್ಭಗಳಲ್ಲಿ ಹೆಲ್ಪ್‌ ಲೈನ್, ಕಸ್ಟಮರ್‌ ಕೇರ್‌ಗೆ ಗ್ರಾಹಕರು ಮೊರೆಹೋಗುವುದು ಸಹಜ. ಆದರೆ ಇದನ್ನೇ ಸೈಬರ್ ವಲ್ಚರ್‌ಗಳು ಹಣ ದೋಚುವ ದಾರಿಯಾಗಿಸಿದ್ದಾರೆ.

ಮಂಗಳೂರಿನಲ್ಲಿ ದಾಖಲಾಗಿದೆ ಪ್ರಕರಣ: ಗೂಗಲ್ ಸರ್ಚ್ ಕೊಟ್ಟ ಕೂಡಲೇ ಅಸಲಿಯಂತೆ ಕಾಣುವ ನಕಲಿ ಹೆಲ್ಪ್‌ ಲೈನ್, ಕಸ್ಟಮರ್ ಕೇರ್ ಸಂಖ್ಯೆಗಳು ಕಂಪ್ಯೂಟರ್ ಪರದೆ ಮೇಲೆ ಬರುವಂತೆ ಈ ಸೈಬರ್ ವಂಚಕರು ಮಾಡುತ್ತಿದ್ದಾರೆ. ಆ ಸಂಖ್ಯೆಯನ್ನು ಪಡೆದು ಗ್ರಾಹಕರು ಕರೆ ಮಾಡಿ ಮಾಹಿತಿಗಳನ್ನು ನೀಡುತ್ತಾ ಹೋದರೆ ಖಾತೆಯಲ್ಲಿರುವ ಹಣ ಸೈಬರ್ ವಲ್ಚರ್‌ಗಳಿಗೆ ಹೋಗುತ್ತದೆ. ಈ ರೀತಿ ಹಣ ಕಳೆದುಕೊಂಡ 2 ಪ್ರಕರಣಗಳು ಮಂಗಳೂರು ಸೈಬರ್ ಕ್ರೈಂ ಠಾಣೆಯಲ್ಲಿ ದಾಖಲಾಗಿವೆ.

2 ಕ್ರೆಡಿಟ್ ಕಾರ್ಡ್ ಹೊಂದಿರುವ ಮಂಗಳೂರಿನ ವ್ಯಕ್ತಿಯೊಬ್ಬರು ಒಂದನ್ನು ಬ್ಲಾಕ್ ಮಾಡುವ ಉದ್ದೇಶದಿಂದ ಗೂಗಲ್‌ನಲ್ಲಿ ಆ ಬ್ಯಾಂಕ್‌ನ ಕಸ್ಟಮರ್ ಕೇರ್ ನಂಬರ್‌ನ್ನು ಹುಡುಕಿ ಕರೆ ಮಾಡಿದ್ದರು. ಕರೆ ಸ್ವೀಕರಿಸಿದಾತ ‘ಎನಿ ಡೆಸ್ಕ್ ಆಯಪ್’ ಡೌನ್ ಲೋಡ್ ಮಾಡುವಂತೆ ತಿಳಿಸಿದ್ದ. ಬಳಿಕ ಕ್ರೆಡಿಟ್ ಕಾರ್ಡ್ ನಂಬರ್ ಪಿನ್ ವಿವರ ಹಾಕುವಂತೆ ತಿಳಿಸಿದ್ದ. ವಿವರ ಹಾಕುವಷ್ಟರಲ್ಲೇ ಖಾತೆಯಿಂದ 1.92 ಲಕ್ಷ ರೂಪಾಯಿ ಮಂಗಮಾಯವಾಗಿತ್ತು.

ಈ ರೀತಿಯ ಹಲವಾರು ಪ್ರಕರಣಗಳು ನಡೆದಿದ್ದರೂ ಹೆಚ್ಚಿನ ಜನರು ಪ್ರಕರಣ ದಾಖಲಿಸಿಲ್ಲ. ಕಷ್ಟದಲ್ಲಿರುವವರ ಆತಂಕ ಗೊಂದಲಗಳನ್ನೇ ಈ ಸೈಬರ್ ವಂಚಕರು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಹೈಲ್ಪ್ ಲೈನ್ ಅಥವಾ ಕಸ್ಟಮರ್ ಕೇರ್ ನಂಬರ್ ಗಳಿಗೆ ಕಾಲ್ ಮಾಡುವ ಮೊದಲು ತುಂಬಾ ಜಾಗರೂಕರಾಗಿ ಇರಬೇಕಾದ ಅವಶ್ಯಕತೆ ಇದೆ.

ಗೂಗಲ್‌ನಲ್ಲಿ ಹೆಲ್ಪ್ ಲೈನ್ ನಂಬರ್ ಹುಡುಕಿ ಕರೆ ಮಾಡುವ ಮೊದಲು ಜಾಗರೂಕರಾಗಿರಬೇಕಾದ ಅಗತ್ಯವಿದೆ. ಸೈಬರ್ ವಂಚಕರು‌ ನಕಲಿ ನಂಬರ್ ಸೃಷ್ಟಿಸಿ ವಂಚಿಸುತ್ತಿದ್ದಾರೆ. ಮಂಗಳೂರಿನಲ್ಲೂ ವಂಚನೆಗೆ ಒಳಗಾದವರು ದೂರು ದಾಖಲಿಸಿದ್ದಾರೆ. – ಹರಿರಾಂ ಶಂಕರ್, ಡಿಸಿಪಿ, ಕಾನೂನು ಮತ್ತು ಸುವ್ಯವಸ್ಥೆ, ಮಂಗಳೂರು

ಡಿಜಿಟಲ್‌ ಮಾರುಕಟ್ಟೆ ಅಭಿವೃದ್ಧಿ ಆದಂತೆ ಆನ್‌ಲೈನ್‌ನಲ್ಲಿ ಹ್ಯಾಕರ್‌ಗಳು, ವಂಚಕರು ಪ್ರತೀ ದಿನ ಮೋಸಕ್ಕೆ ಹೊಸ ವಿಧಾನಗಳನ್ನು ಹುಡುಕುತ್ತಲೇ ಇರುತ್ತಾರೆ. ಜನರ ಹಣ ದೋಚಲು ಸುಳ್ಳು ಹೆಸರಲ್ಲಿ ಲಿಂಕ್ ಕಳುಹಿಸುವುದು, ಬಹುಮಾನ ಸಿಕ್ಕಿದೆ ಎಂದು ಮೋಸ ಮಾಡುವುದು ಇತ್ಯಾದಿ ತಂತ್ರಗಳನ್ನು ವಂಚಕರು ಬಳಸುತ್ತಿದ್ದಾರೆ. ಹೀಗಾಗಿ ಇಂಥಹ ಲಿಂಕ್‌ ಅಥವಾ ಕರೆಗಳ ಮೂಲಕ ಯಾವುದೇ ವೈಯಕ್ತಿಕ ಮಾಹಿತಿಯನ್ನು ಬಹಿರಂಗಗೊಳಿಸುವ ಮುನ್ನ ಎರಡು ಬಾರಿ ಯೋಚಿಸಿವುದು ಒಳಿತು.

ಇದನ್ನೂ ಓದಿ: ಕಳ್ಳತನ ಮಾಡಲು ವಿಮಾನದ ಮೂಲಕ ಬರುತ್ತಿದ್ದ ಖದೀಮರು ಬೆಂಗಳೂರಿನಲ್ಲಿ ಅರೆಸ್ಟ್

- Advertisment -

Most Popular

Quando cinema itau power shopping tabela de preços a concorrência é boa

Como Acelerar Vídeos: 7 Apps, Extensão Grátis no Chrome ou Só com o Celular – Você escolhe! O Tinder está obviamente ciente desse problema, e...

Free Spin Casino Can Be Fun For Everyone

Free Spin Casino - An Overview's complimentary rotates are for Abundant Prize. It is redeemable 5x per day on ports and specialized video games....

Онлайн-казино MostBet – Топ казино интернет, слоты казино демо

СодержаниеКоллекция игровых автоматов от MostBetКак играть на деньги в MostBet казиноОфициальный сайт MostBet, вход и регистрацияЛицензионное казино MostBetMostBet казино бонусы онлайн MostBet предлагает мгновенную игру и...

Pin Up Canlı Casıno gırış — Yeni çıkan casino sitesii

Casino IçeriğiPin Up Giriş Güvenilir Bahis SitesiPin Up Twitter Kayıt OlPin Up’dan harika bir turnuva Şans YarışıPin Up Mobil Giriş SayfasıPin Up Güncel Giriş...

Recent Comments