Tuesday, October 4, 2022
Home ಸುದ್ದಿಗಳು ಕರ್ನಾಟಕ ರಾಜ್ಯದ 6 ಜಿಲ್ಲೆಗಳಲ್ಲಿ ಮಹಾಮಾರಿ ಕೊರೊನಾ ಆರ್ಭಟ: ಕರ್ನಾಟಕದಲ್ಲಿ ಮತ್ತೆ ಲಾಕ್ ಡೌನ್ ಜಾರಿ..!

ರಾಜ್ಯದ 6 ಜಿಲ್ಲೆಗಳಲ್ಲಿ ಮಹಾಮಾರಿ ಕೊರೊನಾ ಆರ್ಭಟ: ಕರ್ನಾಟಕದಲ್ಲಿ ಮತ್ತೆ ಲಾಕ್ ಡೌನ್ ಜಾರಿ..!

ಬೆಂಗಳೂರು: ರಾಜ್ಯದಲ್ಲಿ ಕೊರೊನಾ 2ನೇ ಅಲೆಯ ಇಳಿಕೆಯ ನಂತರ, ಈಗ ಕೊರೊನಾ 3ನೇ ಅಲೆಯ ಆರಂಭದ ಮುನ್ಸೂಚನೆ ದೊರೆತಿದೆ. ಇದೇ ಕಾರಣದಿಂದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಮಹತ್ವದ ರಾಜ್ಯ ತಾಂತ್ರಿಕ ಸಲಹಾ ಸಮಿತಿಯ ಸಭೆ ಕೂಡ ನಡೆಯುತ್ತಿದೆ. ಈ ಸಭೆಯಲ್ಲಿ ಕೊರೊನಾ ಪಾಸಿಟಿವಿಟಿ ದರ ಹೆಚ್ಚಿರುವಂತ ಜಿಲ್ಲೆಗಳಲ್ಲಿ ಕಠಿಣ ರೂಲ್ಸ್ ಜಾರಿಗೆ ಸೂಚಿಸಿದೆ. ಹೀಗಾಗಿ ರಾಜ್ಯದಲ್ಲಿ ಮತ್ತೆ ಲಾಕ್ ಡೌನ್ (Karnataka Lockdown) ಫಿಕ್ಸ್ ಎಂದೇ ಹೇಳಲಾಗುತ್ತಿದೆ.

ಇಂದು ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai) ಅಧ್ಯಕ್ಷತೆಯಲ್ಲಿ ಮಹತ್ವದ ಕೊರೊನಾ 3ನೇ ಅಲೆಯ (Corona 3rd Wave) ತಡೆಯ ಸಂಬಂಧ ರಾಜ್ಯ ತಾಂತ್ರಿಕ ಸಲಹಾ ಸಮಿತಿಯ ಸಭೆ ನಡೆಯುತ್ತಿದೆ. ಈ ಸಭೆಯಲ್ಲಿ ಸಚಿವರು, ತಜ್ಞರು ಸೇರಿದಂತೆ ವಿವಿಧ ಅಧಿಕಾರಿಗಳು ಭಾಗವಹಿಸಿದ್ದಾರೆ. ಈ ಸಭೆಯಲ್ಲಿ ಕೊರೊನಾ ಸೋಂಕಿನ ಪ್ರಕರಣಗಳ ಸಂಖ್ಯೆ ಹೆಚ್ಚಿರುವಂತ ಜಿಲ್ಲೆಗಳಲ್ಲಿ ಕಠಿಣ ನಿಯಮ ಜಾರಿಗೆ ತಾಂತ್ರಿಕ ಸಲಹಾ ಸಮಿತಿ ಸರ್ಕಾರಕ್ಕೆ ಶಿಫಾರಸ್ಸು ಮಾಡಿರೋದಾಗಿ ತಿಳಿದು ಬಂದಿದೆ.

ಅದರಲ್ಲೂ ರಾಜ್ಯದ 6 ಜಿಲ್ಲೆಗಳಾದಂತ ದಕ್ಷಿಣ ಕನ್ನಡ, ಹಾಸನ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಹಾಗೂ ಉಡುಪಿ ಜಿಲ್ಲೆಗಳಲ್ಲಿ ಕಠಿಣ ನಿಯಮ ಜಾರಿಗೆ ಸೂಚಿಸಿರೋದಾಗಿ ತಿಳಿದು ಬಂದಿದೆ. ಅಲ್ಲದೇ ಬೆಂಗಳೂರು ನಗರದಲ್ಲೂ ಕೊರೊನಾ 3ನೇ ಅಲೆಯ ತಡೆಗೆ ಪ್ರತ್ಯೇಕ ಕ್ರಮಕ್ಕೆ ಸೂಚಿಸಿದೆ.

ಅಂದ ಹಾಗೇ ಕಳೆದ 7 ದಿನಗಳಿಂದ ಈ ಆರು ಜಿಲ್ಲೆಗಳಲ್ಲಿ ಕೊರೊನಾ ಪಾಸಿಟಿವಿಟಿ ದರದಲ್ಲಿ (Corona Positivity Rate) ಹೆಚ್ಚಳಗೊಂಡಿರೋದಾಗಿ ತಿಳಿದು ಬಂದಿದೆ. ಶೇ.2ಕ್ಕಿಂತ ಹೆಚ್ಚು ಕೊರೊನಾ ಪಾಸಿಟಿವಿಟಿ ದರ ಏರಿಕೆಯಾದಂತ ಜಿಲ್ಲೆಗಳಲ್ಲಿ ಕಠಿಣ ನಿಯಮ ಜಾರಿ ಕುರಿತಂತೆಯೂ ಇಂದಿನ ಕೊರೊನಾ 3ನೇ ಅಲೆ ನಿಯಂತ್ರಣ ಸಭೆಯಲ್ಲಿ ಚರ್ಚಿಸಲಾಗುತ್ತಿದೆ.

ಇದಲ್ಲದೇ ಕೊರೊನಾ 3ನೇ ಅಲೆಯ ನಿಯಂತ್ರಣ ಕ್ರಮಗಳು, ಕೊರೊನಾ ಲಸಿಕೆಯ ಲಭ್ಯತೆ, ಸೇರಿದಂತೆ ವಿವಿಧ ವಿಚಾರಗಳ ಕುರಿತು ಮಹತ್ವದ ಸಭೆ ನಡೆಯುತ್ತಿದ್ದು, ಸಭೆಯ ಬಳಿಕ ಸಿಎಂ ಬಸವರಾಜ ಬೊಮ್ಮಾಯಿ ಸಭೆಯ ನಿರ್ಣಯಗಳ ಕುರಿತಂತೆ ಮಾಹಿತಿ ನೀಡಲಿದ್ದಾರೆ.

ಇದನ್ನೂ ಓದಿ: ದೇಶದಲ್ಲಿಯೇ ಮೊದಲ ಪ್ರಯೋಗವಾದ ರಾಷ್ಟ್ರೀಯ ವೆಬಿನಾರ್​ ಕಾರ್ಯಕ್ರಮ ಉದ್ಘಾಟಿಸಿದ ಸಿಎಂ ಬಸವರಾಜ ಬೊಮ್ಮಾಯಿ

- Advertisment -

Most Popular

Quando cinema itau power shopping tabela de preços a concorrência é boa

Como Acelerar Vídeos: 7 Apps, Extensão Grátis no Chrome ou Só com o Celular – Você escolhe! O Tinder está obviamente ciente desse problema, e...

Free Spin Casino Can Be Fun For Everyone

Free Spin Casino - An Overview's complimentary rotates are for Abundant Prize. It is redeemable 5x per day on ports and specialized video games....

Онлайн-казино MostBet – Топ казино интернет, слоты казино демо

СодержаниеКоллекция игровых автоматов от MostBetКак играть на деньги в MostBet казиноОфициальный сайт MostBet, вход и регистрацияЛицензионное казино MostBetMostBet казино бонусы онлайн MostBet предлагает мгновенную игру и...

Pin Up Canlı Casıno gırış — Yeni çıkan casino sitesii

Casino IçeriğiPin Up Giriş Güvenilir Bahis SitesiPin Up Twitter Kayıt OlPin Up’dan harika bir turnuva Şans YarışıPin Up Mobil Giriş SayfasıPin Up Güncel Giriş...

Recent Comments