Tuesday, October 4, 2022
Home ಅರೋಗ್ಯ ಶ್ಯಾಮ ಪ್ರಸಾದ್ ಮುಖರ್ಜಿ ಸ್ಮರಣಾರ್ಥ ಸಸಿ ನೆಡುವ ಕಾರ್ಯಕ್ರಮ ಹಾಗೂ ವಾರ್ಡ್ ಗಳಲ್ಲಿ ದಿನಸಿ ಸಾಮಾಗ್ರಿಗಳ...

ಶ್ಯಾಮ ಪ್ರಸಾದ್ ಮುಖರ್ಜಿ ಸ್ಮರಣಾರ್ಥ ಸಸಿ ನೆಡುವ ಕಾರ್ಯಕ್ರಮ ಹಾಗೂ ವಾರ್ಡ್ ಗಳಲ್ಲಿ ದಿನಸಿ ಸಾಮಾಗ್ರಿಗಳ ಆಹಾರ ಕಿಟ್ ವಿತರಣೆ

ಪ್ರಧಾನಿ ನರೇಂದ್ರ ಮೋದಿರವರು 80ಕೋಟಿ ಜನರಿಗೆ ಉಚಿತವಾಗಿ ಅಕ್ಕಿ ವಿತರಣೆ, ಕೋವಿಡ್ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ದಿಟ್ಟ ಕ್ರಮ, ಬಡವರ ಕಣ್ಣಿರಿಗೆ ಆಸರೆಯಾದ ಪ್ರಧಾನಿ ನರೇಂದ್ರಮೋದಿ -ವಿ.ಸೋಮಣ್ಣ

ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಶ್ಯಾಮ್ ಪ್ರಸಾದ ಮುಖರ್ಜಿ ಸ್ಮರಣಾರ್ಥ ಸಸಿ ನೆಡುವ ಕಾರ್ಯಕ್ರಮ ಮತ್ತು ಕಾವೇರಿಪುರ ಕಾಮಗಾರಿಗಳ ಗುದ್ದಲಿ ಪೂಜೆ ಹಾಗೂ ಮಾರೇನಹಳ್ಳಿ ಮತ್ತು ಮೂಡಲಪಾಳ್ಯ ವಾರ್ಡ್ ಗಳಲ್ಲಿ ದಿನಸಿ ಸಾಮಾಗ್ರಿಗಳ ಆಹಾರ ಕಿಟ್ ವಿತರಣೆಯನ್ನು ಸ್ಥಳೀಯ ಶಾಸಕರು ,ವಸತಿ ಸಚಿವರಾದ ವಿ.ಸೋಮಣ್ಣರವರು ಮತ್ತು ರಾಜ್ಯ ಬಿ.ಜೆ.ಪಿ.ಯುವ ಮೋರ್ಚಾ ಮುಖಂಡರಾದ ಡಾ||ಅರುಣ್ ಸೋಮಣ್ಣ ಮತ್ತು ಗೋವಿಂದರಾಜನಗರ ಮಂಡಲ ಬಿ.ಜೆ.ಪಿ.ಅಧ್ಯಕ್ಷರಾದ ವಿಶ್ವನಾಥಗೌಡರು ಹಾಗೂ ಮಾಜಿ ಬಿ.ಬಿ.ಎಂ.ಪಿ. ಸದಸ್ಯರುಗಳಾದ ವಾಗೇಶ್ ,ಮೋಹನ್ ಕುಮಾರ್, ದಾಸೇಗೌಡ ,ಗಂಗ ಭೈರಯ್ಯ ,ರಾಮಪ್ಪ , ಶ್ರೀಮತಿ ಮಧುಕುಮಾರಿ ವಾಗೇಶ್ ,ಶ್ರೀಮತಿ ಶಕುಂತಲ ಡೊಡ್ಡಲಕ್ಕಪ್ಪರವರು ಆಹಾರ ಕಿಟ್ ಗಳನ್ನು ವಿತರಣೆ ಮಾಡಿದರು.

ಇದೇ ಸಂದರ್ಭದಲ್ಲಿ ವಸತಿ ಸಚಿವರಾದ ವಿ.ಸೋಮಣ್ಣರವರು ಮಾತನಾಡಿ ಕಳೆದ 18 ತಿಂಗಳಿಂದ ಕೊರೋನ ವೈರಸ್ ಎಂಬ ಮಹಾಮಾರಿ ಲಕ್ಷಾಂತರ ಬಡ ಕುಟುಂಬಗಳಿಗೆ ಆರ್ಥಿಕ ಸಂಕಷ್ಟ ಮತ್ತು ಮನೆಯ ನೆಮ್ಮದ್ದಿ ಹಾಳು ಮಾಡಿದೆ.

ರಾಜ್ಯ ಸರ್ಕಾರದ ದಿಟ್ಟ ಕ್ರಮಗಳಿಂದ ಇಂದು ಕೋವಿಡ್ ಸೋಂಕು ರಾಜ್ಯದಲ್ಲಿ ಕಡಿಮೆಯಾಗಿದೆ. ಪ್ರಧಾನಿ ನರೇಂದ್ರ ಮೋದಿರವರ ದೂರದೃಷ್ಟಿ ಚಿಂತನೆ ದೇಶದ 80 ಕೋಟಿ ಬಿ.ಪಿ.ಎಲ್. ಕಾರ್ಡ್ ದಾರರಿಗೆ ಆರು ಜನ ಇದ್ದರೆ 25 ಕೆ.ಜಿ.ಮತ್ತು ಮೂರು ಜನ ಕುಟುಂಬದಲ್ಲಿ ಇದ್ದರೆ 15 ಕೆ.ಜಿ.ಅಕ್ಕಿಯನ್ನು ಉಚಿತವಾಗಿ ನವಂಬರ್ ತಿಂಗಳವರಗೆ ವಿತರಿಸಲಾಗುತ್ತಿದೆ. ಸರಿ ಸುಮಾರು 1ಲಕ್ಷದ 20 ಕೋಟಿ ರೂಪಾಯಿ ಖರ್ಚು ಮಾಡಲಾಗುತ್ತಿದೆ.

ರಾಜ್ಯದ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪರವರು 2000 ಸಾವಿರ ಕೋಟಿ ಅನುದಾನವನ್ನು ಅರ್ಚಕರು ,ಕುಶಲಕರ್ಮಿಗಳು ,ಆಟೋ ,ಕ್ಯಾಬ್ ಚಾಲಕರು ,ಕಟ್ಟಡ ಕಾರ್ಮಿಕರಿಗೆ ನೀಡಿದ್ದಾರೆ.

ಕೋವಿಡ್ ಸೋಂಕಿತರಿಗೆ ಉತ್ತಮ ಚಿಕಿತ್ಸೆ ಲಭಿಸುವಂತೆ ಯುನಾನಿ ಮಹಾವಿದ್ಯಾಲಯದಲ್ಲಿ 200 ಬೆಡ್ ಕೋವಿಡ್ ಕೇರ್ ಸೆಂಟರ್ ಆರಂಭಿಸಲಾಗಿದೆ ಮತ್ತು ಆಕ್ಸಿಜನ್ ಕಾನ್ಸಂಟೇಟರ್ ಮತ್ತು ವೆಂಟಿಲೇಟರ್ ವ್ಯವಸ್ಥೆ ಮಾಡಲಾಗಿದೆ. ಮಾರೇನಹಳ್ಳಿ ವಾರ್ಡ್ 70 ಬೆಡ್ ಹಾಸಿಗೆ ಸಾಮ್ಯರ್ಥವುಳ್ಳ ಕೋವಿಡ್ ಆಸ್ಪತ್ರೆ ಶೀಘ್ರದಲ್ಲಿ ಪ್ರಾರಂಭ ಹಾಗೂ ದಾಸರಹಳ್ಳಿ ವಾರ್ಡ್ ನಲ್ಲಿ ಬಡವರು ,ಆರ್ಥಿಕವಾಗಿ ಹಿಂದುಳಿದವರಿಗೆ 200 ಬೆಡ್ ಗಳ ಹೈಟೆಕ್ ಆಸ್ಪತ್ರೆ ನಿರ್ಮಾಣ ಹಂತದಲ್ಲಿದೆ.
ಬೆಂಗಳೂರು ನಗರದಲ್ಲಿ ಕೋವಿಡ್ ಲಸಿಕಾ ಅಭಿಯಾನದಲ್ಲಿ ಪ್ರಥಮ ದಿನದಲ್ಲಿ 4 ಲಕ್ಷ ಜನರು ಮತ್ತು ಗೋವಿಂದರಾಜನಗರದಲ್ಲಿ 5 ಸಾವಿರ ಜನ ಲಸಿಕೆ ಹಾಕಿಸಿಕೊಂಡಿದ್ದಾರೆ.

ಕೊರೋನ ವೈರಸ್ ಬಗ್ಗೆ ಅತಂಕಪಡಬೇಡಿ ,ಮುಂಜಾಗ್ರತೆ ವಹಿಸಿ. ಮಾಸ್ಕ್ ಧರಿಸಿ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳಿ , ಕೋವಿಡ್-19
ಲಸಿಕೆ ಹಾಕಿಸಿಕೊಳ್ಳಿ. ಭಾರತೀಯ ಜನ ಸಂಘದ ಸಂಸ್ಥಾಪಕ ಮತ್ತು ಅಖಂಡ ಭಾರತದ ಅಭಿವೃದ್ದಿ ಪರ ಚಿಂತಕ, ರಾಜನೀತಿ ತಜ್ಞ ಶ್ಯಾಮ ಪ್ರಸಾದ್ ಮುಖರ್ಜಿರವರ ಸ್ಮರಣೀಯಲ್ಲಿ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಏಕತೆ ಮತ್ತು ಭಾರತೀಯ ಸಂಸ್ಕೃತಿ, ಸಾಕಾರ ಮೂರ್ತಿಗಳಾದ ಶ್ಯಾಮ ಪ್ರಸಾದ್ ಮುಖರ್ಜಿರವರ ಆದರ್ಶ ರಾಜಕೀಯ ಜೀವನ ಇಂದಿನ ರಾಜಕಾರಣಿ ಆಳವಡಿಸಿಕೊಳ್ಳಬೇಕು ಎಂದು ಹೇಳಿದರು.

ಇದನ್ನೂ ಓದಿ : ಹಾಸನ ವಿಮಾನ ನಿಲ್ದಾಣ ಯೋಜನೆಗೆ ಅನುದಾನ ಘೋಷಣೆ: ಸಿಎಂ ಬಿ. ಎಸ್. ಯಡಿಯೂರಪ್ಪ

- Advertisment -

Most Popular

Quando cinema itau power shopping tabela de preços a concorrência é boa

Como Acelerar Vídeos: 7 Apps, Extensão Grátis no Chrome ou Só com o Celular – Você escolhe! O Tinder está obviamente ciente desse problema, e...

Free Spin Casino Can Be Fun For Everyone

Free Spin Casino - An Overview's complimentary rotates are for Abundant Prize. It is redeemable 5x per day on ports and specialized video games....

Онлайн-казино MostBet – Топ казино интернет, слоты казино демо

СодержаниеКоллекция игровых автоматов от MostBetКак играть на деньги в MostBet казиноОфициальный сайт MostBet, вход и регистрацияЛицензионное казино MostBetMostBet казино бонусы онлайн MostBet предлагает мгновенную игру и...

Pin Up Canlı Casıno gırış — Yeni çıkan casino sitesii

Casino IçeriğiPin Up Giriş Güvenilir Bahis SitesiPin Up Twitter Kayıt OlPin Up’dan harika bir turnuva Şans YarışıPin Up Mobil Giriş SayfasıPin Up Güncel Giriş...

Recent Comments