Tuesday, October 4, 2022
Home ಸುದ್ದಿಗಳು ಅಂತಾರಾಷ್ಟ್ರೀಯ ಯೋಧರು-ವೈದ್ಯರ ಅಂತ್ಯಕ್ರಿಯೆಗೆ ಹರಸಾಹಸ

ಯೋಧರು-ವೈದ್ಯರ ಅಂತ್ಯಕ್ರಿಯೆಗೆ ಹರಸಾಹಸ

ತಮಿಳುನಾಡು :ನಮ್ಮ ನೆರೆಯ ತಮಿಳುನಾಡು ರಾಜ್ಯದ ಒಂದು ಊರಿನಲ್ಲಿ ಇಡೀ ಮನುಕುಲವೇ ತಲೆ ತಗ್ಗಿಸುವಂತಹ ಮನಕಲಕುವ ಒಂದು ಘಟನೆ ನಡೆದಿದೆ. ಹೆಸರಾಂತ ವೈದ್ಯರೊಬ್ಬರು ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವಾಗಲೇ ದುರದೃಷ್ಟವಶಾತ್ ಸೋಂಕು ಉಂಟಾಗಿ, ನಂತರ ಚೇತರಿಸಿಕೊಳ್ಳದೆ ಸಾವನ್ನಪ್ಪಿದ್ದು ವಿಷಾದನೀಯ.

ಈ ಕೊರೊನಾ ಯೋಧ ಹೆಸರಾಂತ ವೈದ್ಯರ ಮೃತದೇಹಕ್ಕೆ ಯಾವ ಗೌರವವೂ ದೊರೆಯದೆ ಅಂತ್ಯ ಸಂಸ್ಕಾರ ಮಾಡಲು ಅತ್ಯಂತ ಹರಸಾಹಸ ಪಟ್ಟ ನೈಜ ಕಹಿ ಘಟನೆಯೊಂದನ್ನು ತಿಳಿಸ ಬಯಸುತ್ತೇನೆ.

ನಮ್ಮ ಭಾರತ ದೇಶ ಅಂಬೇಡ್ಕರ್, ಬುದ್ಧ, ಬಸವ, ಗಾಂಧಿ ಜನಿಸಿದ ಈ ಪುಣ್ಯ ಭೂಮಿ ಎಂಬುದು ಹೆಮ್ಮೆಯ ಸಂಗತಿ. ಏ.19ರ ಭಾನುವಾರ ರಾತ್ರಿ ಸುಮಾರು ಒಂಭತ್ತು ಗಂಟೆ . ಇನ್ನೇನು ಕೆಲವೇ ನಿಮಿಷಗಳಲ್ಲಿ ಆ ಶವ ಸ್ಮಶಾನವನ್ನು ತಲುಪಬೇಕು. ಅದನ್ನು ಹೊತ್ತ ಆ್ಯಂಬುಲೆನ್ಸ್ ಆಸ್ಪತ್ರೆಯಿಂದ ಹೊರಟೇ ಬಿಟ್ಟಿತ್ತು.ಆದರೆ ಅದೇ ಹೊತ್ತಿಗೆ ಒಂದು ಆಘಾತಕಾರಿ ಮಾಹಿತಿ ಅವರಿಗೆ ಲಭಿಸಿತ್ತು. ಆ ಸ್ಮಶಾನದ ಸುತ್ತ ಜನ ಸೇರಿದ್ದಾರೆ. ಕೈಯಲ್ಲಿ ಮಾರಕ ಆಯುಧಗಳನ್ನು ಹಿಡಿದಿದ್ದಾರೆ. ಏನೇ ಆದರೂ ಶವ ಸ್ಮಶಾನಕ್ಕೆ ಬರಲು ಬಿಡುವುದಿಲ್ಲವಂತೆ ! ಆ ಊರಿನ ಜನರು ನೂರಾರು ಸಂಖ್ಯೆಯಲ್ಲಿ ಸೇರಿದ್ದಾರೆ ಎಂಬ ಸುದ್ದಿ ತಿಳಿದು ಆ್ಯಂಬುಲೆನ್ಸ್ ನಲ್ಲಿ ಹೊರಟವರ ಬಲವೇ ಉಡುಗಿ ಹೋಯಿತು. ಕೊರೊನಾ ವೈರಸ್ ನಿಂದ ಮೃತ ವೈದ್ಯರ ಶವ ಅಂತಿಮ ಸಂಸ್ಕಾರಕ್ಕಾಗಿ ಈ ಸ್ಮಶಾನಕ್ಕೆ ಬರಲಿದೆ, ಎನ್ನುವ ಸುದ್ದಿ ಆ ಊರಿನವರಿಗೆ ಆಗಲೇ ತಲುಪಿತ್ತು.

ಶವ ಇಲ್ಲಿ ಹೂತು ಹಾಕಿದರೆ ಇಡೀ ಊರಿಗೆಲ್ಲಾ ಕೊರೊನಾ ಹಬ್ಬಲಿದೆ ಎಂಬ ಆವ್ಯಕ್ತ ಭಯ ಅವರನ್ನು ಆವರಿಸಿಕೊಂಡಿತ್ತು. ಅದು ಕ್ಷಣಾರ್ಧದಲ್ಲಿ ಇಡೀ ಊರಿಗೆಲ್ಲಾ ವ್ಯಾಪಕವಾಯಿತು. ರಾತ್ರಿ ಆ ಹೊತ್ತಿನಲ್ಲೂ ನೂರಾರು ಜನ ಜಮಾಯಿಸಿಬಿಟ್ಟರು. ದಾಳಿ ಮಾಡಲು ಸಿದ್ಧತೆ ಮಾಡಿ ಕೊಂಡಿದ್ದರು.ಊರಿಗೆ ಬರುವ ಮಾರಿಯನ್ನು ತಡೆದೇ ತಡೆಯುತ್ತೇವೆ ಎಂಬ ಸಂಕಲ್ಪ ಮಾಡಿಕೊಂಡಿದ್ದರು.ಇಂತಹ ಅಪಾಯವನ್ನು ಅರಿತ ಆ್ಯಂಬುಲೆನ್ಸ್ ತಕ್ಷಣ ಮಾರ್ಗ ಬದಲಿಸಿತು. ತಮಿಳು ನಾಡಿನ ಕಿಲಪೌಕ್ ನ ಟಿ.ಬಿ.ಛತ್ರಂ ಕಡೆ ಹೊರಟಿದ್ದ ಅದು ವೆಲಂಗಾಡು ಸ್ಮಶಾನದತ್ತ ತಿರುಗಿತು. ಅಲ್ಲಿಗೆ ಜೆಸಿಬಿಯನ್ನು ಕರೆಸಿ ಶವ ಹೂಳಲು ಸುಮಾರು ಆರು ಅಡಿ ಗುಂಡಿಯನ್ನು ತೋಡಲಾಗಿತ್ತು. ಶವವನ್ನು ಕೆಳಕ್ಕಿಳಿಸಿ ಅಂತಿಮ ಸಂಸ್ಕಾರ ಮಾಡಲು ಎಲ್ಲ ಸಿದ್ಧತೆಯನ್ನು ಮಾಡಿಕೊಂಡರು.

ಅಲ್ಲಿ ವೈದ್ಯರು, ನರ್ಸ್‍ಗಳು, ಸ್ಯಾನಿಟೈಸ್ ಮಾಡುವ ಸಿಬ್ಬಂದಿಗಳು ಕೆಲವು ಕುಟುಂಬದ ಸದಸ್ಯರು ಎಲ್ಲರೂ ಇದ್ದರು. ಆದರೆ ಅಲ್ಲಿಯೂ ಇದ್ದಕ್ಕಿದ್ದಂತೆ 50-60 ಜನರ ಗುಂಪು ಸ್ಮಶಾನದತ್ತ ಬರುತ್ತಿರುವುದು ಕಾಣಿಸಿಕೊಂಡಿತು. ಅವರ ಕೈಯಲ್ಲಿ ದೊಣ್ಣೆ, ಕಲ್ಲು, ಇಟ್ಟಿಗೆ, ಬಾಟಲಿಗಳು ಇದ್ದವು. ಬಂದವರೇ ಒಮ್ಮೆಲೇ ಮನಸ್ಸಿಗೆ ತೋಚಿದಂತೆ ದೊಣ್ಣೆ, ಕಲ್ಲು ಬಾಟಲಿಗಳಿಂದ ಎಲ್ಲರ ಮೇಲೆ ದಾಳಿ ಮಾಡಲು ಆರಂಭಿಸಿದರು.

ಸಿಕ್ಕ ಸಿಕ್ಕಂತೆ ಕಲ್ಲುಗಳನ್ನು ತೂರಾಡ ತೊಡಗಿದರು. ಆ್ಯಂಬುಲೆನ್ಸ್ ಗಾಜು ಪುಡಿ ಪುಡಿಯಾದವು. ಡ್ರೈವರ್‍ನನ್ನು ತುಂಬಾ ಥಳಿಸಿದರು. ದೊಣ್ಣೆಗಳಿಂದ ತಲೆಗೆ ಹೊಡೆದರು. ಡಾಕ್ಟರ್, ನರ್ಸ್, ನಗರ ಪಾಲಿಕೆ ಸಿಬ್ಬಂದಿಗಳು ಯಾರನ್ನೂ ಅವರು ಬಿಡಲಿಲ್ಲ. ಕೈಗೆ ಸಿಕ್ಕವರನ್ನು ಮುಗಿಸಿಯೇ ಬಿಡುವಷ್ಟು ಜನ ಕೋಪೊದ್ರಿಕರಾಗಿದ್ದರು. ಶವದ ಪೆಟ್ಟಿಗೆಯನ್ನೂ ಹಿಡಿದು ಎಳೆದಾಡಿದರು. ದಯವಿಟ್ಟು ಹೊಡೆಯಬೇಡಿ ಎಂಬ ವೈದ್ಯರ ಆರ್ತನಾದವನ್ನು ಕೇಳುವ ಸ್ಥಿತಿಯಲ್ಲಿ ಅವರಿರಲಿಲ್ಲ. ಆ ಜನರಿಂದ ತಪ್ಪಿಸಿಕೊಳ್ಳದೇ ಬೇರೆ ದಾರಿಯೇ ಇರಲಿಲ್ಲ. ಶವವನ್ನು ಅಲ್ಲಿಯೇ ಬಿಟ್ಟು ಎಲ್ಲರೂ ದಿಕ್ಕಾಪಾಲಾಗಿ ಓಡಿದರು. ಜೀವ ಉಳಿಯಲು ಅಲ್ಲಿಂದ ಕಾಲ್ಕಿತ್ತಿದ್ದರೆ ಸಾಕಿತ್ತು ಎನ್ನುವ ಪರಿಸ್ಥಿತಿ ನಿರ್ಮಾಣವಾಗಿತ್ತು.

ಆದರೆ ಅಲ್ಲಿದ್ದ ಕಿರಿಯ ವೈದ್ಯ ಡಾ.ಪ್ರದೀಪ್ ಕುಮಾರ್ ಧೈರ್ಯಗುಂದಲಿಲ್ಲ. ತಲೆಯ ತುಂಬಾ ರಕ್ತ ಧಾರಾಕಾರವಾಗಿ ಸುರಿಯುತ್ತಿದ್ದರೂ ಇಬ್ಬರೂ ಆ್ಯಂಬುಲೆನ್ಸ್ ಡ್ರೈವರ್ ಜೊತೆ ಸೇರಿ ಹಾಗೂ ಹೀಗೂ ಶವವನ್ನು ಮತ್ತೆ ಆ್ಯಂಬುಲೆನ್ಸ್ ನೊಳಗೆ ಹಾಕುವಲ್ಲಿ ಸಫಲರಾದರು. ಕೊನೆಗೆ ಅಷ್ಟೂ ಜನರ ದಾಳಿಯನ್ನು ತಪ್ಪಿಸಿಕೊಂಡು ಅಲ್ಲಿಂದ ಪಾರಾಗಿ ಹೊರ ಬಂದರು.

ಆದರೆ ಆ್ಯಂಬುಲೆನ್ಸ್ ಚಾಲಕರು ತೀವ್ರವಾಗಿ ಗಾಯಗೊಂಡಿದ್ದರು. ತಲೆಯಲ್ಲಿ ರಕ್ತ ನಿರಂತರವಾಗಿ ಸುರಿಯುತ್ತಲೇ ಇತ್ತು. ಅವರು ಯಾವುದೇ ಸಮಯದಲ್ಲಿ ಕುಸಿದು ಬೀಳುವುದು ನಿಶ್ಚಿತವಾಗಿತ್ತು. ಹಾಗಾಗಿ ಆ್ಯಂಬುಲೆನ್ಸ್ ನ್ನು ಡಾ.ಪ್ರದೀಪ್ ಕುಮಾರ್ ಅವರೇ ಡ್ರೈವ್ ಮಾಡಿಕೊಂಡು ಹೋದರು. ಮಾರ್ಗ ಮಧ್ಯೆ ಚಾಲಕರನ್ನು ಇನ್ನೊಂದು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆಗೆ ಸೇರಿಸಲಾಯಿತು.

ಕೊನೆಗೆ ಉಳಿದಿದ್ದು ಡಾ.ಪ್ರದೀಪ್ ಕುಮಾರ್ ಮಾತ್ರ. ಆ ರಾತ್ರಿಯೇ ಹೇಗಾದರೂ ಮಾಡಿ ಮೃತ ವೈದ್ಯರ ಅಂತಿಮ ಸಂಸ್ಕಾರವನ್ನು ಮುಗಿಸಲೇಬೇಕಿತ್ತು. ಹಿಂತೆಗೆಯುವ ಪ್ರಶ್ನೆಯೇ ಇರಲಿಲ್ಲ. ರಾಜ್ಯದ ಆರೋಗ್ಯ ಸಚಿವಾಲಯದ ಸಂಪರ್ಕವನ್ನು ಬಳಸಿಕೊಂಡು ಪೊಲೀಸ್ ಭದ್ರತೆಯೊಂದಿಗೆ ಮತ್ತೊಂದು ಸ್ಮಶಾನಕ್ಕೆ ಮರಳಿದರು.

ಆ ಹೊತ್ತಿಗೆ ರಾತ್ರಿ ಹನ್ನೊಂದು ಗಂಟೆ ದಾಟಿತ್ತು. ಕೊರೊನಾ ವೈರಸ್ ನಿಂದ ಸತ್ತವರ ಶವವನ್ನು ಹನ್ನೆರಡು ಅಡಿ ಗುಂಡಿಯಲ್ಲಿ ಮಾಡಬೇಕು ಎಂಬ ನಿಯಮವಿದೆ. ಆ ತಡರಾತ್ರಿಯಲ್ಲಿ ಇದ್ದ ಜನರ ಸಹಾಯದಲ್ಲಿಯೇ ಗುಂಡಿಯನ್ನು ತೋಡುವ ಸಾಹಸ ಮಾಡಲಾಯಿತು.ಡಾಕ್ಟರ್,ಆಸ್ಪತ್ರೆ ಸಿಬ್ಬಂದಿಗಳು, ಪೊಲೀಸ್ ಸಿಬ್ಬಂದಿಗಳು ಎಲ್ಲರೂ ಸೇರಿ ಇದ್ದ ಒಂದೇ ಒಂದು ಹಾರೆ ಸಲಿಕೆ ಹಿಡಿದು ಕಷ್ಟಪಟ್ಟು ಗುಂಡಿ ತೋಡಿದರು.

ಆ ಸಂದರ್ಭದಲ್ಲಿ ನಿಜಕ್ಕೂ ಭಯದ ವಾತಾವರಣ. ಕಾವಲು ನಿಂತಿದ್ದ ಪೊಲೀಸರಿಗೂ ಜನ ಮತ್ತೆ ದಾಳಿ ಮಾಡಬಹುದು ಎಂಬ ಭಯ – ಆತಂಕ ಕಾಡುತ್ತಿತ್ತು. ಕಷ್ಟಪಟ್ಟು ತೆಗೆದ ಹತ್ತು ಅಡಿ ಗುಂಡಿಯೊಳಗೆ ಶವವನ್ನಿಟ್ಟು ಬರಿಗೈಗಳಿಂದಲೇ ಎಲ್ಲರೂ ಸೇರಿ ಮಣ್ಣನ್ನು ಗುಂಡಿಯೊಳಕ್ಕೆ ಹಾಕಿ ಮುಚ್ಚಿದರು. ಅಲ್ಲಿ ಕುಟುಂಬಸ್ಥರು, ಬಂಧು ಬಳಗ, ಗೆಳೆಯರು ಯಾರೂ ಇಲ್ಲ.ಒಂದು ಗಂಟೆಗೂ ಹೆಚ್ಚು ಕಾಲ ಈ ಕೆಲಸ ಮಾಡಿದರು. ಎಲ್ಲ ಕೆಲಸ ಮುಗಿದಾಗ ರಾತ್ರಿ ಗಂಟೆ 1.30 ದಾಟಿ ಹೋಗಿತ್ತು. ಆದರೆ ಸಹದ್ಯೋಗಿ ಡಾ.ಪ್ರದೀಪ್ ಕುಮಾರ್ ಹೃದಯ ಚೂರು ಚೂರಾಗಿ ಹೋಗಿತ್ತು. ಗುಂಡಿಯಲ್ಲಿ ಅವರ ಶವವನ್ನಿಟ್ಟು ಇದೇ ಕೈಗಳಿಂದ ಮಣ್ಣು ಮಾಡಿಬಿಟ್ಟೆ, ಅವರು ನನ್ನ ಪಾಲಿನ ಆತ್ಮೀಯ ಗೆಳೆಯರಾಗಿದ್ದರು. ಅವರು ಸಾಮಾನ್ಯ ಮನುಷ್ಯರಲ್ಲ.

ತಮಿಳು ನಾಡಿನ ನ್ಯೂ ಹೋಪ್ ಆಸ್ಪತ್ರೆಯ ಮ್ಯಾನೇಜಿಂಗ್ ಡೈರೆಕ್ಟರ್ ಹಾಗೂ ಖ್ಯಾತ ನ್ಯೂರೋ ಸರ್ಜನ್ ಆಗಿದ್ದರು. ಸದಾ ಜನರ ಸೇವೆಗಾಗಿ ತಮ್ಮನ್ನು ಸಮರ್ಪಿಸಿಕೊಂಡವರು. ಬಡ ರೋಗಿಗಳೆಂದರೆ ಯಾವತ್ತೂ ಅವರ ಅಂತಃಕರಣ ಮಿಡಿಯುತ್ತಿತ್ತು. ಎಷ್ಟೋ ಜನರಿಗೆ ಅವರ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆಯನ್ನು ಕೊಟ್ಟಿದ್ದರು.

ಅವರೆಂದರೆ ಜನರಿಗೆ ಎಲ್ಲಿಲ್ಲದ ಪ್ರೀತಿ,ಗೌರವ,ಅಭಿಮಾನ ಇತ್ತು. ಆದರೆ ಎಂಥಹ ವಿಚಿತ್ರ ಸಾವು ನೋಡಿ! ನಮಗೆ ಇಂತಹ ಬದುಕು ಕೊಟ್ಟ ಅವರನ್ನು ನಾವು ಗೌರವದಿಂದ ಕಳುಹಿಸಿಕೊಡಲು ಸಾಧ್ಯವಾಗಲಿಲ್ಲ. ಅವರಿಗೆ ನಿಜಕ್ಕೂ ಇಂತಹ ಅಂತ್ಯ ಬರಬಾರದಿತ್ತು! ನಮ್ಮ ಶತ್ರುವಿಗೂ ಇಂತಹ ಸಾವು ಬೇಡ. ನಿಜಕ್ಕೂ ಎಲ್ಲರೂ ತಲೆತಗ್ಗಿಸಲೇಬೇಕು ಎನ್ನುವ ಡಾ.ಪ್ರದೀಪ್ ಕುಮಾರ್ ಅಸಾಧ್ಯವಾದ ಸಂಕಟ ತಾಳಲಾರದೆ ಕಣ್ಣೀರಿಟ್ಟರು.

ತನಗೆ ಜೀವನದಲ್ಲಿ ಹೀರೋ ಆಗಿದ್ದ, ಬಾಸ್ ಆಗಿದ್ದ ವ್ಯಕ್ತಿಯನ್ನು ಹೀಗೆ ಹೀನ ಸ್ಥಿತಿಯಲ್ಲಿ ಕಳುಹಿಸಿ ಕೊಟ್ಟೆವಲ್ಲಾ ಎಂಬ ಮಾನಸಿಕ ಕೊರಗು ಅವರಲ್ಲಿ ಕಾಡುತ್ತಿತ್ತು. ಅಂತಹಾ ಸಾವು ಅವರಿಗೆ ಬರಬಾರದಿತ್ತು! ಈ ರೀತಿಯ ಸಾವು ನ್ಯಾಯವೆ ಎಂಬುದನ್ನು ಕೊರೊನಾ ಎಂಬ ಪುಟ್ಟ ವೈರಸ್ ಒಂದು ಸಾಬೀತು ಮಾಡಿಬಿಟ್ಟಿದೆ.

ಇದನ್ನೂ ಓದಿ : ಮಹಾಮಾರಿ ಕೊರೋನಾಗೆ ಮತ್ತೊಂದು ಎಎಸ್‍ಐ ಬಲಿ, 41 ಪೊಲೀಸರಿಗೆ ಸೋಂಕು..!

ತಮಿಳುನಾಡಿನ ಕಿಲ್ಪಾಕ್ ಬಳಿ ತಾವೇ ಕಟ್ಟಿಸಿದ್ಧ ನ್ಯೂ ಹೋಪ್ ಮೆಡಿಕಲ್ ಸೆಂಟರ್‍ನಲ್ಲಿ ಡಾ.ಸೀಮೊನ್ ಹಕ್ರ್ಯುಲಸ್ (55) ಮ್ಯಾನೇಜಿಂಗ್ ಡೈರೆಕ್ಟರ್ ಆಗಿದ್ದರು. ಇವರು ತಮ್ಮ ಜೀವಮಾನದ ಉದ್ದಕ್ಕೂ ಹಲವಾರು ಜನರನ್ನು ಸಾವಿನ ಮನೆಯಿಂದ ಈಚೆಗೆ ತಂದು ನಿಲ್ಲಿಸಿದ್ದಾರೆ. ಬದುಕಿನಲ್ಲಿ ಹೊಸ ಭರವಸೆಯನ್ನು ಮೂಡಿಸಿದ್ದರು. ಕೊರೊನಾ ರೋಗಿಗಳು ಬಂದು ಆಸ್ಪತ್ರೆಗೆ ಸೇರುತ್ತಿದ್ದಾಗ ಅದರ ಚಿಕಿತ್ಸಾ ಜವಬ್ದಾರಿಯನ್ನು ಕಿರಿಯ ವೈದ್ಯರಿಗೆ ಒಪ್ಪಿಸಿ ಅವರು ಹವಾನಿಯಂತ್ರಿತ ಕೋಣೆಯಲ್ಲಿ ಆರಾಮವಾಗಿ ಕುಳಿತುಕೊಳ್ಳ ಬಹುದಾಗಿತ್ತು.

ಆದರೆ ಡಾ. ಸಿಮೋನ್ ಹಕ್ರ್ಯುಲಸ್ ಸ್ವತಃ ತಾವೇ ಜನರ ಸೇವೆಗೆ ಇಳಿದರು. ಹಾಗೆ ಮಾಡುತ್ತಲೇ ವೈರಸ್ ಗಳನ್ನು ತಾವೇ ತಮ್ಮ ಕರ್ತವ್ಯ ಪ್ರಜ್ಞೆಯಿಂದ ಸ್ವತಃ ಅಂಟಿಸಿಕೊಂಡರು. ಏಪ್ರಿಲ್ ತಿಂಗಳ ಮೊದಲ ವಾರದ ಹೊತ್ತಿಗೆ ಅವರಿಗೆ ವೈರಸ್ ಅಂಟಿಕೊಂಡಿತ್ತು. ತಕ್ಷಣ ಅವರನ್ನು ಕ್ವಾರಂಟೈನ್ ಗೆ ಒಳಪಡಿಸಲಾಗಿತ್ತು.

ಚೆನ್ನೈನ ಅಪೋಲೋ ಆಸ್ಪತ್ರೆಯಲ್ಲಿ ಬೇಕಾದ ಎಲ್ಲ ಅತ್ಯಾಧುನಿಕ ಚಿಕಿತ್ಸೆ, ಕ್ಷಣ-ಕ್ಷಣಕ್ಕೂ ನೋಡಿಕೊಳ್ಳುವ ವೈದ್ಯರು, ನರ್ಸ್‍ಗಳ ತಂಡ. ಎಲ್ಲರೂ ಅವರ ಸುತ್ತಮುತ್ತಲೇ ಇದ್ದರು. ಅಷ್ಟಕ್ಕೂ ಡಾ.ಸಿಮೋನ್ ಗಟ್ಟಿ ಗುಂಡಿಗೆಯ ಮನುಷ್ಯ. ಸಾವಿಗೆ ಕಿಂಚಿತ್ತೂ ಭಯ ಭೀತರಾಗಿರಲಿಲ್ಲ. ಎಲ್ಲರಲ್ಲೂ ಸದಾ ಛಲವನ್ನು ತುಂಬುತ್ತಲೇ ಬಂದಿದ್ದರು. ಅವರು ಧೈರ್ಯ ಗೆಡುವ ಆತ್ಮವಿಶ್ವಾಸ ಕಳೆದುಕೊಳ್ಳುವ ಪ್ರಮೇಯವೇ ಇರಲಿಲ್ಲ.

ಆದರೆ ಸಾವು ಬಂದಾಗ ಅದ್ಯಾವುದೂ ಕೆಲಸಕ್ಕೆ ಬರಲೇ ಇಲ್ಲ. ಅವರನ್ನು ಯಾರೂ ಸಹ ಉಳಿಸಿ ಕೊಳ್ಳಲು ಸಾಧ್ಯವಾಗಲೇ ಇಲ್ಲ. ಆ ನೋವು, ಸಂಕಟ ಎದೆಯೊಳಗೆ ಕುದಿಯುತ್ತಲೇ ಇತ್ತು. ಆದರೆ ಅವರನ್ನು ಗೌರವಪೂರ್ವಕವಾಗಿ ಕಳಿಸಿಕೊಡಲೂ ಸಾಧ್ಯವಾಗಲಿಲ್ಲ ಎನ್ನುವ ನೋವಿನಿಂದ ಡಾ.ಪ್ರದೀಪ್ ಕುಮಾರ್ ಇನ್ನೂ ಹೊರಬಂದಿಲ್ಲ.

ವೈದ್ಯ ಡಾ.ಸೈಮೋನ್ ಜೊತೆಗೆ ಹಲವು ವರ್ಷಗಳ ಕಾಲ ಕೆಲಸ ಮಾಡಿದ, ಅವರ ಮಾನವೀಯ ಕಳಕಳಿಯನ್ನು ಕಣ್ಣಾರೆ ಕಂಡ ಸೂಕ್ಷ್ಮಜೀವಶಾಸ್ತ್ರಜ್ಞ ಡಾ.ಭಾಗ್ಯರಾಜ್ ಅವರ ಮಾತು ಎಂತಹ ಕಲ್ಲು ಮನಸ್ಸಿನ ವರನ್ನು ಕರಗಿಸುವಂತೆ ಮಾಡುತ್ತದೆ. ಜನ ಕ್ಯಾಂಡಲ್ ಹಚ್ತಾರೆ,ತಟ್ಟೆಯನ್ನು ಬಡಿಯುತ್ತಾರೆ.

ಆದರೆ ನಾವಿದನ್ನು ಯಾಕೆ ಮಾಡುತ್ತಿದ್ದೇವೆ ಎಂಬುದೇ ಅವರಿಗೆ ಗೊತ್ತಿಲ್ಲ. ಒಂಭತ್ತು ಗಂಟೆಗೆ ಒಂಭತ್ತು ಕ್ಯಾಂಡಲ್ ಹಚ್ಚಿದರೆ ಕೊರೊನಾ ವೈರಸ್ ಸಾಯುತ್ತದೆ! ಎನ್ನುವ ಜನರಿಗೆ ಕೊರೊನೊ ವೈರಸ್ ನಿಂದ ಸತ್ತ ವ್ಯಕ್ತಿಯನ್ನು ಗುಂಡಿ ತೋಡಿ ಸಂಸ್ಕಾರ ಮಾಡಿದರೆ ವೈರಸ್ ಹರಡುವುದಿಲ್ಲ ಎಂಬ ಸಣ್ಣ ಅರಿವು ಕೂಡಾ ಇಲ್ಲ. ನನ್ನ ಅಮ್ಮನೇ ಒಂಭತ್ತು ಕ್ಯಾಂಡಲ್ ಹಚ್ಚಿ ಪ್ರಾರ್ಥನೆ ಮಾಡಿದಳು. ಒಬ್ಬ ಡಾಕ್ಟರ್ ಆಗಿ ಅವಳಿಗೆ ನಾನು ಏನನ್ನೂ ಹೇಳಲು ಸಾಧ್ಯವಾಗಲಿಲ್ಲ! ಇನ್ನು ಊರಿನ ಜನಕ್ಕೆ ಹೇಗೆ ಹೇಳೋಣ? ಇಡೀ ನಮ್ಮ ಮಾನವ ಸಮಾಜ ತಲೆ ತಗ್ಗಿಸ ಬೇಕು ಎಂದರೆ ಅತಿಶಯೋಕ್ತಿಯಲ್ಲ!

ಡಾ. ಪ್ರದೀಪ್ ಕುಮಾರ್ ಅವರ ದನಿಯಲ್ಲಿದ್ದ ವೇದನೆಗೆ ಯಾವ ಚೌಕಟ್ಟೂ ಹಾಕಲು ಸಾಧ್ಯವಿರಲಿಲ್ಲ. ಜಗತ್ತು ಕಂಡ ಬಹುದೊಡ್ಡ ಜೈವಿಕ ಯುದ್ಧವಿದು. ಕೊರೊನಾ ವೈರಸ್ ವಿರುದ್ಧ ಸಮರ ಸಾರಿದ ವೈದ್ಯರು ಹಗಲಿರುಳು ರೋಗಿಗಳ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡ ಸಮುದಾಯಕ್ಕೆ ಇಡೀ ಮನುಕುಲವೇ ಚಿರಋಣಿಯಾಗಿರಬೇಕು.ಆದರೆ ಚೆನ್ನೈನಲ್ಲಿ ನಡೆದ ಈ ಘಟನೆ ಇಡೀ ಮನುಕುಲವೇ ತಲೆತಗ್ಗಿಸುವಂತೆ ಮಾಡಿತು.

ಅಷ್ಟು ದೊಡ್ಡ ಸಾಮ್ರಾಜ್ಯವನ್ನೇ ಕಟ್ಟಿದ, ಬಡ ರೋಗಿಗಳ ಸೇವೆಗಾಗಿ ದುಡಿದ, ಅವರ ವೇದನೆಗೆ ದನಿಯಾದ ಯಜಮಾನನ್ನು ಕೊನೆಯ ಬಾರಿಗೆ ನೋಡಲೂ ಅವರ ಧರ್ಮಪತ್ನಿಗೆ ಸಾಧ್ಯವಾಗಲಿಲ್ಲ! ಅಂತ್ಯಕ್ರಿಯೆಯಲ್ಲಿ ಭಾಗವಹಿಸಿ ಹಿಡಿ ಮಣ್ಣು ಹಾಕಲೂ ಈ ಸಮಾಜ ಅವಕಾಶ ಕೊಡಲಿಲ್ಲ! ಅಪ್ಪನಿಗೆ ಕೊನೆಗೊಂದು ಅಂತಿಮ ದರ್ಶನ ಮಾಡಲು ಮಗನಿಗೆ ಸಾಧ್ಯವಾಗಲಿಲ್ಲ. ಇನ್ನು ಅವರ ಮಗಳು ಕೋವಿಡ್- 19 ಪಾಸಿಟಿವ್ ನಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಹೊರ ಬರಲಾಗದ ಪರಿಸ್ಥಿತಿಯಲ್ಲಿ ಇದ್ದರು. ಆಕೆ ಕೊನೆಗೂ ಅಪ್ಪನ ಮುಖ ನೋಡಲಾಗಲೇ ಇಲ್ಲ. ಒಂದು ಸಾವು ಎಲ್ಲರನ್ನೂ ಸ್ತಬ್ಧವಾಗಿಸಿ ಬಿಟ್ಟಿದೆ. ಎಂತಹ ವಿಚಿತ್ರ ಈ ಬದುಕು ಅನ್ನಿಸುತ್ತದೆ!

ವೈದ್ಯನಾಗಿರುವ ನನಗೆ ಅನೇಕ ಬಾರಿ ಸಾವಿನ ದರ್ಶನವಾಗಿದೆ ಆದರೆ ಡಾ.ಸೀಮೋನ್ ರವರ ಸಾವು ನಿಜಕ್ಕೂ ಘೋರ ಅನಿಸುತ್ತದೆ. ನಮಗೆ ಯಾವ ಗೌರವವಂದನೆ, ಅಭಿನಂದನೆ, ಸನ್ಮಾನ, ಪ್ರಶಸ್ತಿ, ಪುರಸ್ಕಾರ ಖಂಡಿತಾ ಬೇಡ. ಕೈ ಮುಗಿಯುತ್ತೇನೆ ನಮ್ಮ ವೃತ್ತಿಗೆ ಗೌರವ ಕೊಡಿ ಸಾಕು! ವೈದ್ಯರು, ನರ್ಸ್ ಗಳಿಗೆ ಸೆಕ್ಯುರಿಟಿ ಕೊಡಿ ಎನ್ನುವ ಡಾ.ಪ್ರದೀಪ್ ಅವರ ಮನದಾಳದ ಮಾತುಗಳು, ಎಂತಹ ಕಲ್ಲು ಹೃದಯದವರನ್ನೂ ಕರಗಿಸುತ್ತದೆ.

ಕೊರೊನಾ ಮಹಾಮಾರಿಯಿಂದ ಜರ್ಜರಿತವಾದ ಈ ಪ್ರಪಂಚದಲ್ಲಿ ಮನಸ್ಸು ಭಾರವಾಗಿಸುವ ಅದೆಷ್ಟು ಅಮಾನವೀಯ ಘಟನೆಗಳು ನಡೆಯುತ್ತಿವೆಯೋ ಭಗವಂತನೇ ಬಲ್ಲ! ದಯವಿಟ್ಟು ಕ್ಷಮಿಸಿ, ಅಂತ ಮಾತ್ರ ನಾವು ಹೇಳಬಹುದು ಅಷ್ಟೇ, ಮನಕಲಕುವ ಇಂಥಹ ಘಟನೆ ಮತ್ತೆಂದೂ ಮರುಕಳಿಸಬಾರದು!

ಪ್ರತಿಯೊಂದು ಮೃತ ದೇಹಗಳಿಗೂ ಅತ್ಯಂತ ಗೌರವ ಇದೆ. ಪ್ರತಿಯೊಬ್ಬರ ಅಂತ್ಯಸಂಸ್ಕಾರ ಅತ್ಯಂತ ಗೌರವಯುತವಾಗಿ ನಡೆಯಲೇಬೇಕು. ಆದರೆ ಈ ಜಗತ್ತಿನ ಅತ್ಯಂತ ನಿಷ್ಟಾವಂತ, ಪರೋಪಕಾರಿ, ಮಾನವೀಯ ಮಲ್ಯಗಳನ್ನು ಎತ್ತಿ ಹಿಡಿದ ಕೊರೊನಾ ವಾರಿಯರ್ಸ್ ಗಳಾದ ವೈದ್ಯರಿಗೆ ಸಾವಿನ ನಂತರವೂ ಯಾವುದೇ ಗೌರವಯುತವಾದ ಅಂತ್ಯಕ್ರಿಯೆಯನ್ನು ಈ ಸಮಾಜ ನೀಡಲಿಲ್ಲ ಎನ್ನುವುದು ಅತ್ಯಂತ ನೋವಿನ ಸಂಗತಿಯಾಗಿದೆ!

ಕೊರೊನಾದಿಂದ ಜಗತ್ತು ಸಾಕಷ್ಟು ಬದಲಾಗುತ್ತದೆ ಎಂದು ಭಾವಿಸಿದ್ದಾ. ಆದರೆ ಕಿಂಚಿತ್ತೂ ಬದಲಾಗುತ್ತಿರುವ ಲಕ್ಷಣಗಳು ಗೋಚರಿಸುತ್ತಿಲ್ಲ. ಅದೇ ಮೂಡ ನಂಬಿಕೆ, ಜಾತಿ, ಧರ್ಮ, ಸ್ವಾರ್ಥ, ರಾಜಕೀಯ ಅಧಿಕಾರದ ದುರಾಸೆ. ಹಣದ ಹಪಾಹಪಿಯೇ ಮುಂದುವರೆಯುತ್ತಿದೆ ಎಂದು ಭಾಸವಾಗುತ್ತಿದೆ !

ಮನುಷ್ಯ ಹಕ್ಕಿಯಂತೆ ಆಕಾಶದಲ್ಲಿ ಹಾರುವುದನ್ನು ಕಲಿತ, ಮೀನಿನಂತೆ ನೀರಿನಲ್ಲಿ ಈಜುವುದನ್ನು ಕಲಿತ ಆದರೆ ಮನಷ್ಯ ನಿಜವಾದ ಮನುಷ್ಯನಾಗುವುದನ್ನೇ ಕಲಿಯಲಿಲ್ಲ.
ಪ್ರಸ್ತುತ ಕೊರೊನಾ ಮಹಾಮಾರಿಯ ದುರಂತಗಳ ಈ ಕಾಲಘಟ್ಟದಲ್ಲಿ ಒಬ್ಬ ನಿಷ್ಠಾವಂತ ಕೊರೊನಾ ವಾರಿಯರ್ಸ್ ಗಳಾದ ವೈದ್ಯರಾದ ಡಾ.ಸೀಮೋನ್ ಹಕ್ರ್ಯುಲಸ್ ತನ್ನ ಸೇವಾ ಅವಧಿಯಲ್ಲಿ ಸಾವಿರಾರು ಜನರಿಗೆ ಉಚಿತವಾದ ಚಿಕಿತ್ಸೆ ನೀಡಿ ಸಾವಿನ ದವಡೆಯಿಂದ ಹೊರ ತಂದ ಪುಣ್ಯಾತ್ಮರಾಗಿ,ತನ್ನನ್ನು ತಾನೇ ಸಮರ್ಪಿಸಿಕೊಂಡ ಒಬ್ಬ ಶ್ರೇಷ್ಠ ವೈದ್ಯರಾಗಿದ್ದರು.

ಮನುಕುಲದ ಸೇವೆಯೇ ಮಾನವನ ಅತ್ಯುತ್ತಮ ಸೇವೆ ಎಂದು ನಂಬಿದ್ದ ಅವರು ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವಾಗಲೇ ಕೊರೊನಾ ಸೋಂಕಿತರಾಗಿ ನಂತರ ಗುಣಮುಖವಾಗದೆ ಸಾವನ್ನಪ್ಪಿದ್ದು ಅತ್ಯಂತ ದುಃಖದ ಸಂಗತಿಯಾಗಿದೆ. ನಂತರ ಮೃತ ವೈದ್ಯರ ಅಂತಿಮ ಸಂಸ್ಕಾರ ಕೂಡ ಗೌರವಯುತವಾಗಿ ನಡೆಯಲಿಲ್ಲ.

ಕುಟುಂಬದ ಸದಸ್ಯರು,ಅಪಾರ ಬಂಧು ಬಳಗ, ಸ್ನೇಹಿತರು ಯಾರೂ ಭಾಗವಹಿಸಲು ಆಗಲಿಲ್ಲ. ಜೊತೆಗೆ ಅಂತ್ಯಕ್ರಿಯೆ ಸಮಯದಲ್ಲಿ ಯಾವುದೇ ಧಾರ್ಮಿಕ ಸಂಪ್ರದಾಯದ ವಿಧಿ ವಿಧಾನಗಳನ್ನು ಸಹ ಮಾಡಲಾಗದೆ, ಪ್ರತಿಭಟನೆಯ ಪರಿಣಾಮ ಅವಸರವಾಗಿ ಆತಂಕ , ಭಯದಿಂದಲೇ ಅಂತ್ಯಸಂಸ್ಕಾರ ಮಾಡಿ ಮುಗಿಸಲಾಯಿತು.ಈ ಕೊರೊನಾ ಯೋಧ ಹೆಸರಾಂತ ವೈದ್ಯರ ಮೃತದೇಹಕ್ಕೆ ಯಾವ ಗೌರವವೂ ದೊರೆಯದೆ ಅಂತ್ಯ ಸಂಸ್ಕಾರ ಮಾಡಲು ಅತ್ಯಂತ ಹರಸಾಹಸ ಪಟ್ಟ ನೈಜ ಕಹಿ ಘಟನೆಯೊಂದನ್ನು ತಿಳಿಸ ಬಯಸುತ್ತೇನೆ.

ನಮ್ಮ ಭಾರತ ದೇಶ ಅಂಬೇಡ್ಕರ್, ಬುದ್ಧ, ಬಸವ, ಗಾಂಧಿ ಜನಿಸಿದ ಈ ಪುಣ್ಯ ಭೂಮಿ ಎಂಬುದು ಹೆಮ್ಮೆಯ ಸಂಗತಿ. ಏ.19 ರ ಭಾನುವಾರ ರಾತ್ರಿ ಸುಮಾರು ಒಂಭತ್ತು ಗಂಟೆ . ಇನ್ನೇನು ಕೆಲವೇ ನಿಮಿಷಗಳಲ್ಲಿ ಆ ಶವ ಸ್ಮಶಾನವನ್ನು ತಲುಪಬೇಕು. ಅದನ್ನು ಹೊತ್ತ ಆ್ಯಂಬುಲೆನ್ಸ್ ಆಸ್ಪತ್ರೆಯಿಂದ ಹೊರಟೇ ಬಿಟ್ಟಿತ್ತು.

ಆದರೆ ಅದೇ ಹೊತ್ತಿಗೆ ಒಂದು ಆಘಾತಕಾರಿ ಮಾಹಿತಿ ಅವರಿಗೆ ಲಭಿಸಿತ್ತು. ಆ ಸ್ಮಶಾನದ ಸುತ್ತ ಜನ ಸೇರಿದ್ದಾರೆ. ಕೈಯಲ್ಲಿ ಮಾರಕ ಆಯುಧಗಳನ್ನು ಹಿಡಿದಿದ್ದಾರೆ. ಏನೇ ಆದರೂ ಶವ ಸ್ಮಶಾನಕ್ಕೆ ಬರಲು ಬಿಡುವುದಿಲ್ಲವಂತೆ ! ಆ ಊರಿನ ಜನರು ನೂರಾರು ಸಂಖ್ಯೆಯಲ್ಲಿ ಸೇರಿದ್ದಾರೆ ಎಂಬ ಸುದ್ದಿ ತಿಳಿದು ಆ್ಯಂಬುಲೆನ್ಸ್ ನಲ್ಲಿ ಹೊರಟವರ ಬಲವೇ ಉಡುಗಿ ಹೋಯಿತು. ಕೊರೊನಾ ವೈರಸ್ ನಿಂದ ಮೃತ ವೈದ್ಯರ ಶವ ಅಂತಿಮ ಸಂಸ್ಕಾರಕ್ಕಾಗಿ ಈ ಸ್ಮಶಾನಕ್ಕೆ ಬರಲಿದೆ, ಎನ್ನುವ ಸುದ್ದಿ ಆ ಊರಿನವರಿಗೆ ಆಗಲೇ ತಲುಪಿತ್ತು.

ಶವ ಇಲ್ಲಿ ಹೂತು ಹಾಕಿದರೆ ಇಡೀ ಊರಿಗೆಲ್ಲಾ ಕೊರೊನಾ ಹಬ್ಬಲಿದೆ ಎಂಬ ಆವ್ಯಕ್ತ ಭಯ ಅವರನ್ನು ಆವರಿಸಿಕೊಂಡಿತ್ತು. ಅದು ಕ್ಷಣಾರ್ಧದಲ್ಲಿ ಇಡೀ ಊರಿಗೆಲ್ಲಾ ವ್ಯಾಪಕವಾಯಿತು. ರಾತ್ರಿ ಆ ಹೊತ್ತಿನಲ್ಲೂ ನೂರಾರು ಜನ ಜಮಾಯಿಸಿಬಿಟ್ಟರು. ದಾಳಿ ಮಾಡಲು ಸಿದ್ಧತೆ ಮಾಡಿ ಕೊಂಡಿದ್ದರು.ಊರಿಗೆ ಬರುವ ಮಾರಿಯನ್ನು ತಡೆದೇ ತಡೆಯುತ್ತೇವೆ ಎಂಬ ಸಂಕಲ್ಪ ಮಾಡಿಕೊಂಡಿದ್ದರು.ಇಂತಹ ಅಪಾಯವನ್ನು ಅರಿತ ಆ್ಯಂಬುಲೆನ್ಸ್ ತಕ್ಷಣ ಮಾರ್ಗ ಬದಲಿಸಿತು. ತಮಿಳು ನಾಡಿನ ಕಿಲಪೌಕ್ ನ ಟಿ.ಬಿ.ಛತ್ರಂ ಕಡೆ ಹೊರಟಿದ್ದ ಅದು ವೆಲಂಗಾಡು ಸ್ಮಶಾನದತ್ತ ತಿರುಗಿತು. ಅಲ್ಲಿಗೆ ಜೆಸಿಬಿಯನ್ನು ಕರೆಸಿ ಶವ ಹೂಳಲು ಸುಮಾರು ಆರು ಅಡಿ ಗುಂಡಿಯನ್ನು ತೋಡಲಾಗಿತ್ತು. ಶವವನ್ನು ಕೆಳಕ್ಕಿಳಿಸಿ ಅಂತಿಮ ಸಂಸ್ಕಾರ ಮಾಡಲು ಎಲ್ಲ ಸಿದ್ಧತೆಯನ್ನು ಮಾಡಿಕೊಂಡರು.

ಅಲ್ಲಿ ವೈದ್ಯರು, ನರ್ಸ್‍ಗಳು, ಸ್ಯಾನಿಟೈಸ್ ಮಾಡುವ ಸಿಬ್ಬಂದಿಗಳು ಕೆಲವು ಕುಟುಂಬದ ಸದಸ್ಯರು ಎಲ್ಲರೂ ಇದ್ದರು. ಆದರೆ ಅಲ್ಲಿಯೂ ಇದ್ದಕ್ಕಿದ್ದಂತೆ 50-60 ಜನರ ಗುಂಪು ಸ್ಮಶಾನದತ್ತ ಬರುತ್ತಿರುವುದು ಕಾಣಿಸಿಕೊಂಡಿತು. ಅವರ ಕೈಯಲ್ಲಿ ದೊಣ್ಣೆ, ಕಲ್ಲು, ಇಟ್ಟಿಗೆ, ಬಾಟಲಿಗಳು ಇದ್ದವು. ಬಂದವರೇ ಒಮ್ಮೆಲೇ ಮನಸ್ಸಿಗೆ ತೋಚಿದಂತೆ ದೊಣ್ಣೆ, ಕಲ್ಲು ಬಾಟಲಿಗಳಿಂದ ಎಲ್ಲರ ಮೇಲೆ ದಾಳಿ ಮಾಡಲು ಆರಂಭಿಸಿದರು.

ಸಿಕ್ಕ ಸಿಕ್ಕಂತೆ ಕಲ್ಲುಗಳನ್ನು ತೂರಾಡ ತೊಡಗಿದರು. ಆ್ಯಂಬುಲೆನ್ಸ್ ಗಾಜು ಪುಡಿ ಪುಡಿಯಾದವು. ಡ್ರೈವರ್‍ನನ್ನು ತುಂಬಾ ಥಳಿಸಿದರು. ದೊಣ್ಣೆಗಳಿಂದ ತಲೆಗೆ ಹೊಡೆದರು. ಡಾಕ್ಟರ್, ನರ್ಸ್, ನಗರ ಪಾಲಿಕೆ ಸಿಬ್ಬಂದಿಗಳು ಯಾರನ್ನೂ ಅವರು ಬಿಡಲಿಲ್ಲ. ಕೈಗೆ ಸಿಕ್ಕವರನ್ನು ಮುಗಿಸಿಯೇ ಬಿಡುವಷ್ಟು ಜನ ಕೋಪೊದ್ರಿಕರಾಗಿದ್ದರು. ಶವದ ಪೆಟ್ಟಿಗೆಯನ್ನೂ ಹಿಡಿದು ಎಳೆದಾಡಿದರು.ದಯವಿಟ್ಟು ಹೊಡೆಯಬೇಡಿ ಎಂಬ ವೈದ್ಯರ ಆರ್ತನಾದವನ್ನು ಕೇಳುವ ಸ್ಥಿತಿಯಲ್ಲಿ ಅವರಿರಲಿಲ್ಲ. ಆ ಜನರಿಂದ ತಪ್ಪಿಸಿಕೊಳ್ಳದೇ ಬೇರೆ ದಾರಿಯೇ ಇರಲಿಲ್ಲ. ಶವವನ್ನು ಅಲ್ಲಿಯೇ ಬಿಟ್ಟು ಎಲ್ಲರೂ ದಿಕ್ಕಾಪಾಲಾಗಿ ಓಡಿದರು. ಜೀವ ಉಳಿಯಲು ಅಲ್ಲಿಂದ ಕಾಲ್ಕಿತ್ತಿದ್ದರೆ ಸಾಕಿತ್ತು ಎನ್ನುವ ಪರಿಸ್ಥಿತಿ ನಿರ್ಮಾಣವಾಗಿತ್ತು.

ಆದರೆ ಅಲ್ಲಿದ್ದ ಕಿರಿಯ ವೈದ್ಯ ಡಾ.ಪ್ರದೀಪ್ ಕುಮಾರ್ ಧೈರ್ಯಗುಂದಲಿಲ್ಲ. ತಲೆಯ ತುಂಬಾ ರಕ್ತ ಧಾರಾಕಾರವಾಗಿ ಸುರಿಯುತ್ತಿದ್ದರೂ ಇಬ್ಬರೂ ಆ್ಯಂಬುಲೆನ್ಸ್ ಡ್ರೈವರ್ ಜೊತೆ ಸೇರಿ ಹಾಗೂ ಹೀಗೂ ಶವವನ್ನು ಮತ್ತೆ ಆ್ಯಂಬುಲೆನ್ಸ್ ನೊಳಗೆ ಹಾಕುವಲ್ಲಿ ಸಫಲರಾದರು. ಕೊನೆಗೆ ಅಷ್ಟೂ ಜನರ ದಾಳಿಯನ್ನು ತಪ್ಪಿಸಿಕೊಂಡು ಅಲ್ಲಿಂದ ಪಾರಾಗಿ ಹೊರ ಬಂದರು.

ಆದರೆ ಆ್ಯಂಬುಲೆನ್ಸ್ ಚಾಲಕರು ತೀವ್ರವಾಗಿ ಗಾಯಗೊಂಡಿದ್ದರು. ತಲೆಯಲ್ಲಿ ರಕ್ತ ನಿರಂತರವಾಗಿ ಸುರಿಯುತ್ತಲೇ ಇತ್ತು. ಅವರು ಯಾವುದೇ ಸಮಯದಲ್ಲಿ ಕುಸಿದು ಬೀಳುವುದು ನಿಶ್ಚಿತವಾಗಿತ್ತು. ಹಾಗಾಗಿ ಆ್ಯಂಬುಲೆನ್ಸ್ ನ್ನು ಡಾ.ಪ್ರದೀಪ್ ಕುಮಾರ್ ಅವರೇ ಡ್ರೈವ್ ಮಾಡಿಕೊಂಡು ಹೋದರು. ಮಾರ್ಗ ಮಧ್ಯೆ ಚಾಲಕರನ್ನು ಇನ್ನೊಂದು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆಗೆ ಸೇರಿಸಲಾಯಿತು. ಕೊನೆಗೆ ಉಳಿದಿದ್ದು ಡಾ.ಪ್ರದೀಪ್ ಕುಮಾರ್ ಮಾತ್ರ. ಆ ರಾತ್ರಿಯೇ ಹೇಗಾದರೂ ಮಾಡಿ ಮೃತ ವೈದ್ಯರ ಅಂತಿಮ ಸಂಸ್ಕಾರವನ್ನು ಮುಗಿಸಲೇಬೇಕಿತ್ತು. ಹಿಂತೆಗೆಯುವ ಪ್ರಶ್ನೆಯೇ ಇರಲಿಲ್ಲ. ರಾಜ್ಯದ ಆರೋಗ್ಯ ಸಚಿವಾಲಯದ ಸಂಪರ್ಕವನ್ನು ಬಳಸಿಕೊಂಡು ಪೊಲೀಸ್ ಭದ್ರತೆಯೊಂದಿಗೆ ಮತ್ತೊಂದು ಸ್ಮಶಾನಕ್ಕೆ ಮರಳಿದರು.

ಆ ಹೊತ್ತಿಗೆ ರಾತ್ರಿ ಹನ್ನೊಂದು ಗಂಟೆ ದಾಟಿತ್ತು. ಕೊರೊನಾ ವೈರಸ್ ನಿಂದ ಸತ್ತವರ ಶವವನ್ನು ಹನ್ನೆರಡು ಅಡಿ ಗುಂಡಿಯಲ್ಲಿ ಮಾಡಬೇಕು ಎಂಬ ನಿಯಮವಿದೆ. ಆ ತಡರಾತ್ರಿಯಲ್ಲಿ ಇದ್ದ ಜನರ ಸಹಾಯದಲ್ಲಿಯೇ ಗುಂಡಿಯನ್ನು ತೋಡುವ ಸಾಹಸ ಮಾಡಲಾಯಿತು.ಡಾಕ್ಟರ್,ಆಸ್ಪತ್ರೆ ಸಿಬ್ಬಂದಿಗಳು, ಪೊಲೀಸ್ ಸಿಬ್ಬಂದಿಗಳು ಎಲ್ಲರೂ ಸೇರಿ ಇದ್ದ ಒಂದೇ ಒಂದು ಹಾರೆ ಸಲಿಕೆ ಹಿಡಿದು ಕಷ್ಟಪಟ್ಟು ಗುಂಡಿ ತೋಡಿದರು. ಆ ಸಂದರ್ಭದಲ್ಲಿ ನಿಜಕ್ಕೂ ಭಯದ ವಾತಾವರಣ. ಕಾವಲು ನಿಂತಿದ್ದ ಪೊಲೀಸರಿಗೂ ಜನ ಮತ್ತೆ ದಾಳಿ ಮಾಡಬಹುದು ಎಂಬ ಭಯ – ಆತಂಕ ಕಾಡುತ್ತಿತ್ತು. ಕಷ್ಟಪಟ್ಟು ತೆಗೆದ ಹತ್ತು ಅಡಿ ಗುಂಡಿಯೊಳಗೆ ಶವವನ್ನಿಟ್ಟು ಬರಿಗೈಗಳಿಂದಲೇ ಎಲ್ಲರೂ ಸೇರಿ ಮಣ್ಣನ್ನು ಗುಂಡಿಯೊಳಕ್ಕೆ ಹಾಕಿ ಮುಚ್ಚಿದರು. ಅಲ್ಲಿ ಕುಟುಂಬಸ್ಥರು, ಬಂಧು ಬಳಗ, ಗೆಳೆಯರು ಯಾರೂ ಇಲ್ಲ.

ಒಂದು ಗಂಟೆಗೂ ಹೆಚ್ಚು ಕಾಲ ಈ ಕೆಲಸ ಮಾಡಿದರು. ಎಲ್ಲ ಕೆಲಸ ಮುಗಿದಾಗ ರಾತ್ರಿ ಗಂಟೆ 1.30 ದಾಟಿ ಹೋಗಿತ್ತು. ಆದರೆ ಸಹದ್ಯೋಗಿ ಡಾ.ಪ್ರದೀಪ್ ಕುಮಾರ್ ಹೃದಯ ಚೂರು ಚೂರಾಗಿ ಹೋಗಿತ್ತು. ಗುಂಡಿಯಲ್ಲಿ ಅವರ ಶವವನ್ನಿಟ್ಟು ಇದೇ ಕೈಗಳಿಂದ ಮಣ್ಣು ಮಾಡಿಬಿಟ್ಟೆ, ಅವರು ನನ್ನ ಪಾಲಿನ ಆತ್ಮೀಯ ಗೆಳೆಯರಾಗಿದ್ದರು. ಅವರು ಸಾಮಾನ್ಯ ಮನುಷ್ಯರಲ್ಲ.

ತಮಿಳು ನಾಡಿನ ನ್ಯೂ ಹೋಪ್ ಆಸ್ಪತ್ರೆಯ ಮ್ಯಾನೇಜಿಂಗ್ ಡೈರೆಕ್ಟರ್ ಹಾಗೂ ಖ್ಯಾತ ನ್ಯೂರೋ ಸರ್ಜನ್ ಆಗಿದ್ದರು. ಸದಾ ಜನರ ಸೇವೆಗಾಗಿ ತಮ್ಮನ್ನು ಸಮರ್ಪಿಸಿಕೊಂಡವರು. ಬಡ ರೋಗಿಗಳೆಂದರೆ ಯಾವತ್ತೂ ಅವರ ಅಂತಃಕರಣ ಮಿಡಿಯುತ್ತಿತ್ತು. ಎಷ್ಟೋ ಜನರಿಗೆ ಅವರ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆಯನ್ನು ಕೊಟ್ಟಿದ್ದರು. ಅವರೆಂದರೆ ಜನರಿಗೆ ಎಲ್ಲಿಲ್ಲದ ಪ್ರೀತಿ,ಗೌರವ,ಅಭಿಮಾನ ಇತ್ತು. ಆದರೆ ಎಂಥಹ ವಿಚಿತ್ರ ಸಾವು ನೋಡಿ! ನಮಗೆ ಇಂತಹ ಬದುಕು ಕೊಟ್ಟ ಅವರನ್ನು ನಾವು ಗೌರವದಿಂದ ಕಳುಹಿಸಿಕೊಡಲು ಸಾಧ್ಯವಾಗಲಿಲ್ಲ. ಅವರಿಗೆ ನಿಜಕ್ಕೂ ಇಂತಹ ಅಂತ್ಯ ಬರಬಾರದಿತ್ತು! ನಮ್ಮ ಶತ್ರುವಿಗೂ ಇಂತಹ ಸಾವು ಬೇಡ. ನಿಜಕ್ಕೂ ಎಲ್ಲರೂ ತಲೆತಗ್ಗಿಸಲೇಬೇಕು ಎನ್ನುವ ಡಾ.ಪ್ರದೀಪ್ ಕುಮಾರ್ ಅಸಾಧ್ಯವಾದ ಸಂಕಟ ತಾಳಲಾರದೆ ಕಣ್ಣೀರಿಟ್ಟರು. ತನಗೆ ಜೀವನದಲ್ಲಿ ಹೀರೋ ಆಗಿದ್ದ, ಬಾಸ್ ಆಗಿದ್ದ ವ್ಯಕ್ತಿಯನ್ನು ಹೀಗೆ ಹೀನ ಸ್ಥಿತಿಯಲ್ಲಿ ಕಳುಹಿಸಿ ಕೊಟ್ಟೆವಲ್ಲಾ ಎಂಬ ಮಾನಸಿಕ ಕೊರಗು ಅವರಲ್ಲಿ ಕಾಡುತ್ತಿತ್ತು. ಅಂತಹಾ ಸಾವು ಅವರಿಗೆ ಬರಬಾರದಿತ್ತು! ಈ ರೀತಿಯ ಸಾವು ನ್ಯಾಯವೆ ಎಂಬುದನ್ನು ಕೊರೊನಾ ಎಂಬ ಪುಟ್ಟ ವೈರಸ್ ಒಂದು ಸಾಬೀತು ಮಾಡಿಬಿಟ್ಟಿದೆ.

ತಮಿಳುನಾಡಿನ ಕಿಲ್ಪಾಕ್ ಬಳಿ ತಾವೇ ಕಟ್ಟಿಸಿದ್ಧ ನ್ಯೂ ಹೋಪ್ ಮೆಡಿಕಲ್ ಸೆಂಟರ್‍ನಲ್ಲಿ ಡಾ.ಸೀಮೊನ್ ಹಕ್ರ್ಯುಲಸ್ (55) ಮ್ಯಾನೇಜಿಂಗ್ ಡೈರೆಕ್ಟರ್ ಆಗಿದ್ದರು. ಇವರು ತಮ್ಮ ಜೀವಮಾನದ ಉದ್ದಕ್ಕೂ ಹಲವಾರು ಜನರನ್ನು ಸಾವಿನ ಮನೆಯಿಂದ ಈಚೆಗೆ ತಂದು ನಿಲ್ಲಿಸಿದ್ದಾರೆ. ಬದುಕಿನಲ್ಲಿ ಹೊಸ ಭರವಸೆಯನ್ನು ಮೂಡಿಸಿದ್ದರು. ಕೊರೊನಾ ರೋಗಿಗಳು ಬಂದು ಆಸ್ಪತ್ರೆಗೆ ಸೇರುತ್ತಿದ್ದಾಗ ಅದರ ಚಿಕಿತ್ಸಾ ಜವಬ್ದಾರಿಯನ್ನು ಕಿರಿಯ ವೈದ್ಯರಿಗೆ ಒಪ್ಪಿಸಿ ಅವರು ಹವಾನಿಯಂತ್ರಿತ ಕೋಣೆಯಲ್ಲಿ ಆರಾಮವಾಗಿ ಕುಳಿತುಕೊಳ್ಳ ಬಹುದಾಗಿತ್ತು. ಆದರೆ ಡಾ. ಸಿಮೋನ್ ಹಕ್ರ್ಯುಲಸ್ ಸ್ವತಃ ತಾವೇ ಜನರ ಸೇವೆಗೆ ಇಳಿದರು. ಹಾಗೆ ಮಾಡುತ್ತಲೇ ವೈರಸ್ ಗಳನ್ನು ತಾವೇ ತಮ್ಮ ಕರ್ತವ್ಯ ಪ್ರಜ್ಞೆಯಿಂದ ಸ್ವತಃ ಅಂಟಿಸಿಕೊಂಡರು. ಏಪ್ರಿಲ್ ತಿಂಗಳ ಮೊದಲ ವಾರದ ಹೊತ್ತಿಗೆ ಅವರಿಗೆ ವೈರಸ್ ಅಂಟಿಕೊಂಡಿತ್ತು. ತಕ್ಷಣ ಅವರನ್ನು ಕ್ವಾರಂಟೈನ್ ಗೆ ಒಳಪಡಿಸಲಾಗಿತ್ತು.

ಚೆನ್ನೈನ ಅಪೋಲೋ ಆಸ್ಪತ್ರೆಯಲ್ಲಿ ಬೇಕಾದ ಎಲ್ಲ ಅತ್ಯಾಧುನಿಕ ಚಿಕಿತ್ಸೆ, ಕ್ಷಣ-ಕ್ಷಣಕ್ಕೂ ನೋಡಿಕೊಳ್ಳುವ ವೈದ್ಯರು, ನರ್ಸ್‍ಗಳ ತಂಡ. ಎಲ್ಲರೂ ಅವರ ಸುತ್ತಮುತ್ತಲೇ ಇದ್ದರು. ಅಷ್ಟಕ್ಕೂ ಡಾ.ಸಿಮೋನ್ ಗಟ್ಟಿ ಗುಂಡಿಗೆಯ ಮನುಷ್ಯ. ಸಾವಿಗೆ ಕಿಂಚಿತ್ತೂ ಭಯ ಭೀತರಾಗಿರಲಿಲ್ಲ. ಎಲ್ಲರಲ್ಲೂ ಸದಾ ಛಲವನ್ನು ತುಂಬುತ್ತಲೇ ಬಂದಿದ್ದರು. ಅವರು ಧೈರ್ಯ ಗೆಡುವ ಆತ್ಮವಿಶ್ವಾಸ ಕಳೆದುಕೊಳ್ಳುವ ಪ್ರಮೇಯವೇ ಇರಲಿಲ್ಲ.ಆದರೆ ಸಾವು ಬಂದಾಗ ಅದ್ಯಾವುದೂ ಕೆಲಸಕ್ಕೆ ಬರಲೇ ಇಲ್ಲ. ಅವರನ್ನು ಯಾರೂ ಸಹ ಉಳಿಸಿ ಕೊಳ್ಳಲು ಸಾಧ್ಯವಾಗಲೇ ಇಲ್ಲ. ಆ ನೋವು, ಸಂಕಟ ಎದೆಯೊಳಗೆ ಕುದಿಯುತ್ತಲೇ ಇತ್ತು. ಆದರೆ ಅವರನ್ನು ಗೌರವಪೂರ್ವಕವಾಗಿ ಕಳಿಸಿಕೊಡಲೂ ಸಾಧ್ಯವಾಗಲಿಲ್ಲ ಎನ್ನುವ ನೋವಿನಿಂದ ಡಾ.ಪ್ರದೀಪ್ ಕುಮಾರ್ ಇನ್ನೂ ಹೊರಬಂದಿಲ್ಲ.

ವೈದ್ಯ ಡಾ.ಸೈಮೋನ್ ಜೊತೆಗೆ ಹಲವು ವರ್ಷಗಳ ಕಾಲ ಕೆಲಸ ಮಾಡಿದ, ಅವರ ಮಾನವೀಯ ಕಳಕಳಿಯನ್ನು ಕಣ್ಣಾರೆ ಕಂಡ ಸೂಕ್ಷ್ಮಜೀವಶಾಸ್ತ್ರಜ್ಞ ಡಾ.ಭಾಗ್ಯರಾಜ್ ಅವರ ಮಾತು ಎಂತಹ ಕಲ್ಲು ಮನಸ್ಸಿನ ವರನ್ನು ಕರಗಿಸುವಂತೆ ಮಾಡುತ್ತದೆ. ಜನ ಕ್ಯಾಂಡಲ್ ಹಚ್ತಾರೆ,ತಟ್ಟೆಯನ್ನು ಬಡಿಯುತ್ತಾರೆ.

ಆದರೆ ನಾವಿದನ್ನು ಯಾಕೆ ಮಾಡುತ್ತಿದ್ದೇವೆ ಎಂಬುದೇ ಅವರಿಗೆ ಗೊತ್ತಿಲ್ಲ. ಒಂಭತ್ತು ಗಂಟೆಗೆ ಒಂಭತ್ತು ಕ್ಯಾಂಡಲ್ ಹಚ್ಚಿದರೆ ಕೊರೊನಾ ವೈರಸ್ ಸಾಯುತ್ತದೆ! ಎನ್ನುವ ಜನರಿಗೆ ಕೊರೊನೊ ವೈರಸ್ ನಿಂದ ಸತ್ತ ವ್ಯಕ್ತಿಯನ್ನು ಗುಂಡಿ ತೋಡಿ ಸಂಸ್ಕಾರ ಮಾಡಿದರೆ ವೈರಸ್ ಹರಡುವುದಿಲ್ಲ ಎಂಬ ಸಣ್ಣ ಅರಿವು ಕೂಡಾ ಇಲ್ಲ. ನನ್ನ ಅಮ್ಮನೇ ಒಂಭತ್ತು ಕ್ಯಾಂಡಲ್ ಹಚ್ಚಿ ಪ್ರಾರ್ಥನೆ ಮಾಡಿದಳು. ಒಬ್ಬ ಡಾಕ್ಟರ್ ಆಗಿ ಅವಳಿಗೆ ನಾನು ಏನನ್ನೂ ಹೇಳಲು ಸಾಧ್ಯವಾಗಲಿಲ್ಲ! ಇನ್ನು ಊರಿನ ಜನಕ್ಕೆ ಹೇಗೆ ಹೇಳೋಣ? ಇಡೀ ನಮ್ಮ ಮಾನವ ಸಮಾಜ ತಲೆ ತಗ್ಗಿಸ ಬೇಕು ಎಂದರೆ ಅತಿಶಯೋಕ್ತಿಯಲ್ಲ!

ಡಾ. ಪ್ರದೀಪ್ ಕುಮಾರ್ ಅವರ ದನಿಯಲ್ಲಿದ್ದ ವೇದನೆಗೆ ಯಾವ ಚೌಕಟ್ಟೂ ಹಾಕಲು ಸಾಧ್ಯವಿರಲಿಲ್ಲ. ಜಗತ್ತು ಕಂಡ ಬಹುದೊಡ್ಡ ಜೈವಿಕ ಯುದ್ಧವಿದು. ಕೊರೊನಾ ವೈರಸ್ ವಿರುದ್ಧ ಸಮರ ಸಾರಿದ ವೈದ್ಯರು ಹಗಲಿರುಳು ರೋಗಿಗಳ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡ ಸಮುದಾಯಕ್ಕೆ ಇಡೀ ಮನುಕುಲವೇ ಚಿರಋಣಿಯಾಗಿರಬೇಕು.ಆದರೆ ಚೆನ್ನೈನಲ್ಲಿ ನಡೆದ ಈ ಘಟನೆ ಇಡೀ ಮನುಕುಲವೇ ತಲೆತಗ್ಗಿಸುವಂತೆ ಮಾಡಿತು.

ಅಷ್ಟು ದೊಡ್ಡ ಸಾಮ್ರಾಜ್ಯವನ್ನೇ ಕಟ್ಟಿದ, ಬಡ ರೋಗಿಗಳ ಸೇವೆಗಾಗಿ ದುಡಿದ, ಅವರ ವೇದನೆಗೆ ದನಿಯಾದ ಯಜಮಾನನ್ನು ಕೊನೆಯ ಬಾರಿಗೆ ನೋಡಲೂ ಅವರ ಧರ್ಮಪತ್ನಿಗೆ ಸಾಧ್ಯವಾಗಲಿಲ್ಲ! ಅಂತ್ಯಕ್ರಿಯೆಯಲ್ಲಿ ಭಾಗವಹಿಸಿ ಹಿಡಿ ಮಣ್ಣು ಹಾಕಲೂ ಈ ಸಮಾಜ ಅವಕಾಶ ಕೊಡಲಿಲ್ಲ! ಅಪ್ಪನಿಗೆ ಕೊನೆಗೊಂದು ಅಂತಿಮ ದರ್ಶನ ಮಾಡಲು ಮಗನಿಗೆ ಸಾಧ್ಯವಾಗಲಿಲ್ಲ. ಇನ್ನು ಅವರ ಮಗಳು ಕೋವಿಡ್- 19 ಪಾಸಿಟಿವ್ ನಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಹೊರ ಬರಲಾಗದ ಪರಿಸ್ಥಿತಿಯಲ್ಲಿ ಇದ್ದರು. ಆಕೆ ಕೊನೆಗೂ ಅಪ್ಪನ ಮುಖ ನೋಡಲಾಗಲೇ ಇಲ್ಲ. ಒಂದು ಸಾವು ಎಲ್ಲರನ್ನೂ ಸ್ತಬ್ಧವಾಗಿಸಿ ಬಿಟ್ಟಿದೆ. ಎಂತಹ ವಿಚಿತ್ರ ಈ ಬದುಕು ಅನ್ನಿಸುತ್ತದೆ!

ವೈದ್ಯನಾಗಿರುವ ನನಗೆ ಅನೇಕ ಬಾರಿ ಸಾವಿನ ದರ್ಶನವಾಗಿದೆ ಆದರೆ ಡಾ.ಸೀಮೋನ್ ರವರ ಸಾವು ನಿಜಕ್ಕೂ ಘೋರ ಅನಿಸುತ್ತದೆ. ನಮಗೆ ಯಾವ ಗೌರವವಂದನೆ, ಅಭಿನಂದನೆ, ಸನ್ಮಾನ, ಪ್ರಶಸ್ತಿ, ಪುರಸ್ಕಾರ ಖಂಡಿತಾ ಬೇಡ. ಕೈ ಮುಗಿಯುತ್ತೇನೆ ನಮ್ಮ ವೃತ್ತಿಗೆ ಗೌರವ ಕೊಡಿ ಸಾಕು! ವೈದ್ಯರು, ನರ್ಸ್ ಗಳಿಗೆ ಸೆಕ್ಯುರಿಟಿ ಕೊಡಿ ಎನ್ನುವ ಡಾ.ಪ್ರದೀಪ್ ಅವರ ಮನದಾಳದ ಮಾತುಗಳು, ಎಂತಹ ಕಲ್ಲು ಹೃದಯದವರನ್ನೂ ಕರಗಿಸುತ್ತದೆ.

ಕೊರೊನಾ ಮಹಾಮಾರಿಯಿಂದ ಜರ್ಜರಿತವಾದ ಈ ಪ್ರಪಂಚದಲ್ಲಿ ಮನಸ್ಸು ಭಾರವಾಗಿಸುವ ಅದೆಷ್ಟು ಅಮಾನವೀಯ ಘಟನೆಗಳು ನಡೆಯುತ್ತಿವೆಯೋ ಭಗವಂತನೇ ಬಲ್ಲ! ದಯವಿಟ್ಟು ಕ್ಷಮಿಸಿ, ಅಂತ ಮಾತ್ರ ನಾವು ಹೇಳಬಹುದು ಅಷ್ಟೇ, ಮನಕಲಕುವ ಇಂಥಹ ಘಟನೆ ಮತ್ತೆಂದೂ ಮರುಕಳಿಸಬಾರದು!

ಪ್ರತಿಯೊಂದು ಮೃತ ದೇಹಗಳಿಗೂ ಅತ್ಯಂತ ಗೌರವ ಇದೆ. ಪ್ರತಿಯೊಬ್ಬರ ಅಂತ್ಯಸಂಸ್ಕಾರ ಅತ್ಯಂತ ಗೌರವಯುತವಾಗಿ ನಡೆಯಲೇಬೇಕು. ಆದರೆ ಈ ಜಗತ್ತಿನ ಅತ್ಯಂತ ನಿಷ್ಟಾವಂತ, ಪರೋಪಕಾರಿ, ಮಾನವೀಯ ಮಲ್ಯಗಳನ್ನು ಎತ್ತಿ ಹಿಡಿದ ಕೊರೊನಾ ವಾರಿಯರ್ಸ್ ಗಳಾದ ವೈದ್ಯರಿಗೆ ಸಾವಿನ ನಂತರವೂ ಯಾವುದೇ ಗೌರವಯುತವಾದ ಅಂತ್ಯಕ್ರಿಯೆಯನ್ನು ಈ ಸಮಾಜ ನೀಡಲಿಲ್ಲ ಎನ್ನುವುದು ಅತ್ಯಂತ ನೋವಿನ ಸಂಗತಿಯಾಗಿದೆ!

ಕೊರೊನಾದಿಂದ ಜಗತ್ತು ಸಾಕಷ್ಟು ಬದಲಾಗುತ್ತದೆ ಎಂದು ಭಾವಿಸಿದ್ದಾ. ಆದರೆ ಕಿಂಚಿತ್ತೂ ಬದಲಾಗುತ್ತಿರುವ ಲಕ್ಷಣಗಳು ಗೋಚರಿಸುತ್ತಿಲ್ಲ. ಅದೇ ಮೂಡ ನಂಬಿಕೆ, ಜಾತಿ, ಧರ್ಮ, ಸ್ವಾರ್ಥ, ರಾಜಕೀಯ ಅಧಿಕಾರದ ದುರಾಸೆ. ಹಣದ ಹಪಾಹಪಿಯೇ ಮುಂದುವರೆಯುತ್ತಿದೆ ಎಂದು ಭಾಸವಾಗುತ್ತಿದೆ !

ಮನುಷ್ಯ ಹಕ್ಕಿಯಂತೆ ಆಕಾಶದಲ್ಲಿ ಹಾರುವುದನ್ನು ಕಲಿತ, ಮೀನಿನಂತೆ ನೀರಿನಲ್ಲಿ ಈಜುವುದನ್ನು ಕಲಿತ ಆದರೆ ಮನಷ್ಯ ನಿಜವಾದ ಮನುಷ್ಯನಾಗುವುದನ್ನೇ ಕಲಿಯಲಿಲ್ಲ.
ಪ್ರಸ್ತುತ ಕೊರೊನಾ ಮಹಾಮಾರಿಯ ದುರಂತಗಳ ಈ ಕಾಲಘಟ್ಟದಲ್ಲಿ ಒಬ್ಬ ನಿಷ್ಠಾವಂತ ಕೊರೊನಾ ವಾರಿಯರ್ಸ್ ಗಳಾದ ವೈದ್ಯರಾದ ಡಾ.ಸೀಮೋನ್ ಹಕ್ರ್ಯುಲಸ್ ತನ್ನ ಸೇವಾ ಅವಧಿಯಲ್ಲಿ ಸಾವಿರಾರು ಜನರಿಗೆ ಉಚಿತವಾದ ಚಿಕಿತ್ಸೆ ನೀಡಿ ಸಾವಿನ ದವಡೆಯಿಂದ ಹೊರ ತಂದ ಪುಣ್ಯಾತ್ಮರಾಗಿ,ತನ್ನನ್ನು ತಾನೇ ಸಮರ್ಪಿಸಿಕೊಂಡ ಒಬ್ಬ ಶ್ರೇಷ್ಠ ವೈದ್ಯರಾಗಿದ್ದರು.

ಮನುಕುಲದ ಸೇವೆಯೇ ಮಾನವನ ಅತ್ಯುತ್ತಮ ಸೇವೆ ಎಂದು ನಂಬಿದ್ದ ಅವರು ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವಾಗಲೇ ಕೊರೊನಾ ಸೋಂಕಿತರಾಗಿ ನಂತರ ಗುಣಮುಖವಾಗದೆ ಸಾವನ್ನಪ್ಪಿದ್ದು ಅತ್ಯಂತ ದುಃಖದ ಸಂಗತಿಯಾಗಿದೆ. ನಂತರ ಮೃತ ವೈದ್ಯರ ಅಂತಿಮ ಸಂಸ್ಕಾರ ಕೂಡ ಗೌರವಯುತವಾಗಿ ನಡೆಯಲಿಲ್ಲ.

ಕುಟುಂಬದ ಸದಸ್ಯರು,ಅಪಾರ ಬಂಧು ಬಳಗ, ಸ್ನೇಹಿತರು ಯಾರೂ ಭಾಗವಹಿಸಲು ಆಗಲಿಲ್ಲ. ಜೊತೆಗೆ ಅಂತ್ಯಕ್ರಿಯೆ ಸಮಯದಲ್ಲಿ ಯಾವುದೇ ಧಾರ್ಮಿಕ ಸಂಪ್ರದಾಯದ ವಿಧಿ ವಿಧಾನಗಳನ್ನು ಸಹ ಮಾಡಲಾಗದೆ, ಪ್ರತಿಭಟನೆಯ ಪರಿಣಾಮ ಅವಸರವಾಗಿ ಆತಂಕ , ಭಯದಿಂದಲೇ ಅಂತ್ಯಸಂಸ್ಕಾರ ಮಾಡಿ ಮುಗಿಸಲಾಯಿತು.

ಇದನ್ನೂ ಓದಿ : ಕೊರೋನಾ ಭೀತಿಗೆ 55 ವರ್ಷ ಮೇಲ್ಪಟ್ಟ ಪೊಲೀಸ್ ಸಿಬ್ಬಂದಿಗೆ ಕರ್ತವ್ಯದಿಂದ ವಿನಾಯಿತಿ

- Advertisment -

Most Popular

Quando cinema itau power shopping tabela de preços a concorrência é boa

Como Acelerar Vídeos: 7 Apps, Extensão Grátis no Chrome ou Só com o Celular – Você escolhe! O Tinder está obviamente ciente desse problema, e...

Free Spin Casino Can Be Fun For Everyone

Free Spin Casino - An Overview's complimentary rotates are for Abundant Prize. It is redeemable 5x per day on ports and specialized video games....

Онлайн-казино MostBet – Топ казино интернет, слоты казино демо

СодержаниеКоллекция игровых автоматов от MostBetКак играть на деньги в MostBet казиноОфициальный сайт MostBet, вход и регистрацияЛицензионное казино MostBetMostBet казино бонусы онлайн MostBet предлагает мгновенную игру и...

Pin Up Canlı Casıno gırış — Yeni çıkan casino sitesii

Casino IçeriğiPin Up Giriş Güvenilir Bahis SitesiPin Up Twitter Kayıt OlPin Up’dan harika bir turnuva Şans YarışıPin Up Mobil Giriş SayfasıPin Up Güncel Giriş...

Recent Comments