Tuesday, October 4, 2022
Home ಸುದ್ದಿಗಳು ಅಂತಾರಾಷ್ಟ್ರೀಯ ಎಲ್ಲೆಂದರಲ್ಲಿ ಕಾಣಿಸುತ್ತಿದೆ Z ಸಿಂಬಲ್: ಇದು ರಷ್ಯಾದ ಯುದ್ಧದ ಸಂಕೇತ..!

ಎಲ್ಲೆಂದರಲ್ಲಿ ಕಾಣಿಸುತ್ತಿದೆ Z ಸಿಂಬಲ್: ಇದು ರಷ್ಯಾದ ಯುದ್ಧದ ಸಂಕೇತ..!

ಕೀವ್: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಉಕ್ರೇನ್ ಮೇಲೆ ಯುದ್ಧ ಘೋಷಿಸಿದಾಗಿನಿಂದ ಅಲ್ಲಿನ ಹಲವು ಕಟ್ಟಡಗಳಲ್ಲಿ, ವಾಹನಗಳಲ್ಲಿ ಕೆಲವು ನಿಗೂಢ ಸಂಕೇತಗಳು ಮೂಡುತ್ತಿವೆ. ಇದೀಗ ಉಕ್ರೇನ್ ಗಡಿ ಬಳಿಯಲ್ಲಿರುವ ರಷ್ಯಾದ ಟ್ಯಾಂಕ್, ಮಿಲಿಟರಿ ಟ್ರಕ್‌ಗಳಲ್ಲಿ Z ಗುರುತು ಕಾಣಿಸುತ್ತಿವೆ.

ಇಲ್ಲಿಯವರೆಗೆ ವಾಹನ ಹಾಗೂ ಮಿಲಿಟರಿ ಯಂತ್ರಗಳಲ್ಲಿ ಕೇವಲ Z ಚಿನ್ಹೆ ಮಾತ್ರ ಇರದೇ O, X, A, V ಚಿನ್ಹೆಗಳೂ ಕಾಣಿಸಿಕೊಂಡಿದ್ದವು. ಆದರೆ ಈ ಚಿನ್ಹೆಗಳ ಹಿನ್ನೆಲೆ ಏನು, ಇದನ್ನು ಏಕೆ ಬರೆಯಲಾಗುತ್ತದೆ ಎಂದು ಹೆಚ್ಚಿನವರಿಗೆ ತಿಳಿದಿಲ್ಲ.

ಇನ್‌ಸ್ಟಾಗ್ರಾಮ್ ಹಾಗೂ ಟ್ವಿಟ್ಟರ್‌ಗಳಲ್ಲಿ ಹಲವರು ಈ ನಿಗೂಢ ಸಂಕೇತಗಳ ಬಗೆಗೆ ವಿವರಿಸಿದ್ದಾರೆ. ಹಲವರು ತಮ್ಮ ತಮ್ಮ ಅಭಿಪ್ರಾಯ ಹಾಗೂ ವ್ಯಾಖ್ಯಾನ ನೀಡಿದ್ದಾರೆ.

Z ಎಂದರೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸಿ ಹಾಗೂ V ಎಂದರೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಎಂದು ಕೆಲವರು ಅಭಿಪ್ರಾಯ ಪಟ್ಟಿದ್ದಾರೆ. ತಮ್ಮ ತಮ್ಮ ಪಡೆಗಳನ್ನು ಗುರುತಿಸಲು ಈ ರೀತಿಯಾಗಿ ಸಂಕೇತಗಳನ್ನು ಬರೆಯಲಾಗಿದೆ ಎನ್ನಲಾಗುತ್ತಿದೆ. ಕುತೂಹಲಕಾರಿ ಸಂಗತಿಯೆoದರೆ  ಸಿರಿಲಿಕ್ ರಷ್ಯನ್ ವರ್ಣಮಾಲೆಯಲ್ಲಿ Z ಹಾಗೂ V ಅಕ್ಷರಗಳೇ ಅಸ್ಥಿತ್ವದಲ್ಲಿ ಇಲ್ಲ.

ಇನ್ನೂ ಕೆಲವರು ರಷ್ಯಾದ ಪಡೆಗಳು ಪರಸ್ಪರ ದಾಳಿಯಿಂದ ರಕ್ಷಿಸಿಕೊಳ್ಳಲು ತಮ್ಮ ಟ್ಯಾಂಕ್‌ಗಳಲ್ಲಿ ಈ ರೀತಿಯ ಅಕ್ಷರಗಳನ್ನು ಬರೆಯುತ್ತಿದ್ದಾರೆ ಎನ್ನಲಾಗುತ್ತಿದೆ. 

ರಷ್ಯಾದ ರಕ್ಷಣಾ ಸಚಿವಾಲಯ ತನ್ನ ಇನ್‌ಸ್ಟಾಗ್ರಾಮ್ ಪುಟದಲ್ಲಿ Z ಹಾಗೂ V ಅಕ್ಷರಗಳ ವಿನ್ಯಾಸದ ಗ್ರಾಫಿಕ್ಸ್ಒಂದನ್ನು ಹಂಚಿಕೊಂಡಿದೆ. ಆದರೆ ಈ ಎರಡು ಅಕ್ಷರಗಳು ಏನನ್ನು ಸೂಚಿಸುತ್ತದೆ ಎಂಬುದರ ಬಗ್ಗೆ ಅಧಿಕೃತವಾಗಿ ಎಲ್ಲಿಯೂ ವಿವರಣೆಗಳನ್ನು ನೀಡಿಲ್ಲ.

ಒಟ್ಟಿನಲ್ಲಿ Z ಅಕ್ಷರ ರಷ್ಯಾ ಸೈನ್ಯದ ಸಂಕೇತ ಎನ್ನಲಾಗುತ್ತಿದೆ. ದೇಶಾದ್ಯಂತ ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ಜನರು ಈ ಗುರುತನ್ನು ವ್ಯಾಪಕವಾಗಿ ಬಳಸುತ್ತಿದ್ದಾರೆ. ಕೇವಲ ಯುದ್ಧದ ಟ್ಯಾಂಕ್‌ಗಳಲ್ಲಿ ಮಾತ್ರವಲ್ಲದೇ ನಾಗರಿಕರೂ ತಮ್ಮ ವಾಹನಗಳಲ್ಲಿ ಈ ಸಂಕೇತವನ್ನು ಬಳಸುತ್ತಿರುವುದು ಗಮನಾರ್ಹವಾಗಿದೆ.

ಇದನ್ನೂ ಓದಿ: BIG NEWS: ಹಿಜಾಬ್ ತಂಟೆಗೆ ಬಂದ್ರೆ ತುಂಡು ತುಂಡು ಮಾಡೋದಾಗಿ ಹೇಳಿದ ಕೈ ಮುಖಂಡ ಮುಕ್ರಂಖಾನ್ ಪರಿಸ್ಥಿತಿ ಹೇಗಿದೆ ಗೊತ್ತಾ..?

- Advertisment -

Most Popular

Quando cinema itau power shopping tabela de preços a concorrência é boa

Como Acelerar Vídeos: 7 Apps, Extensão Grátis no Chrome ou Só com o Celular – Você escolhe! O Tinder está obviamente ciente desse problema, e...

Free Spin Casino Can Be Fun For Everyone

Free Spin Casino - An Overview's complimentary rotates are for Abundant Prize. It is redeemable 5x per day on ports and specialized video games....

Онлайн-казино MostBet – Топ казино интернет, слоты казино демо

СодержаниеКоллекция игровых автоматов от MostBetКак играть на деньги в MostBet казиноОфициальный сайт MostBet, вход и регистрацияЛицензионное казино MostBetMostBet казино бонусы онлайн MostBet предлагает мгновенную игру и...

Pin Up Canlı Casıno gırış — Yeni çıkan casino sitesii

Casino IçeriğiPin Up Giriş Güvenilir Bahis SitesiPin Up Twitter Kayıt OlPin Up’dan harika bir turnuva Şans YarışıPin Up Mobil Giriş SayfasıPin Up Güncel Giriş...

Recent Comments